LATEST NEWS
ಕರಿಂಜೆ ಮಠದ ಮುಕ್ತಾನಂದ ಸ್ವಾಮೀಜಿಗೆ ಏಕವಚನದಲ್ಲಿ ನಿಂದಿಸಿದ ಶಾಸಕ ಅಭಯಚಂದ್ರ ಜೈನ್
ಕರಿಂಜೆ ಮಠದ ಮುಕ್ತಾನಂದ ಸ್ವಾಮೀಜಿಗೆ ಏಕವಚನದಲ್ಲಿ ನಿಂದಿಸಿದ ಶಾಸಕ ಅಭಯಚಂದ್ರ ಜೈನ್
ಮಂಗಳೂರು, ಮಾರ್ಚ್ 14 : ಕರಿಂಜೆ ಮಠದ ಮುಕ್ತಾನಂದ ಸ್ವಾಮೀಜಿಗೆ ಮೂಲ್ಕಿ – ಮೂಡಬಿದಿರೆ ಶಾಸಕ ಅಭಯ ಚಂದ್ರ ಜೈನ್ ಅವರು ಏಕವಚನದಲ್ಲಿ ನಿಂದಿಸಿದ್ದಾರೆ.
ಸ್ಥಳೀಯ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಂಡ ಸ್ವಾಮೀಜಿ ಅವರು ಹಿಂದೂ ಕಾರ್ಯಕರ್ತರ ಪರ ಮಾತನಾಡಿದ್ದರು.
ಈ ಹಿನ್ನೆಲೆಯಲ್ಲಿ ಅಭಯ ಚಂದ್ರ ಜೈನ್ ಸ್ವಾಮೀಜಿಗೆ ಏಕವಚನದಲ್ಲಿ ನಿಂದನೆ ಮಾಡಿದ್ದರು.
ಕರಿಂಜೆ ಶ್ರೀಗಳು ಶಿರ್ತಾಡಿಯ ಅರ್ಜುನಾಪುರದಲ್ಲಿ ನಡೆದಿದ್ದ ವಿಶ್ವ ಹಿಂದೂ ಪರಿಷತ್ತಿನ ಸಾರ್ವಜನಿಕ ಶ್ರೀ ಶನೀಶ್ಚರ ಪೂಜೆಯಲ್ಲಿ ಅದ್ಭುತ ಭಾಷಣವನ್ನೇ ಮಾಡಿದ್ದರು.
ಈ ಭಾಷಣದಲ್ಲಿ ರಾವಣ ಆಡಳಿತ ದೂರವಾಗಿ ರಾಮ ರಾಜ್ಯ ಸೃಷ್ಟಿಯಾಗಬೇಕು ಎಂದು ಹೇಳಿದ್ದರು.
ಸ್ವಾಮೀಜಿಗಳು ತನ್ನ ಮೇಲೆಯೇ ಹೀಗೆ ಹೇಳಿದ್ದಾರೆ ಎಂದು ಭಾವಿಸಿ ಶಾಸಕ ಅಭಯಚಂದ್ರ ಜೈನ್ ಸ್ವಾಮೀಜಿ ಮೇಲೆಯೇ ಹರಿಹಾಯ್ದಿದ್ದಾರೆ.
ಶ್ರೀಗಳಿಗೆ ಏಕವಚನದಲ್ಲಿ ನಿಂದಿಸಿದ್ದಾರೆ.ಶ್ರೀ ಮುಕ್ತಾನಂದ ಸ್ವಾಮೀಜಿಯವರಿಗೆ ಅಭಯ ಚಂದ್ರ ಜೈನ್ ಕರಿಂಜೆ ಶ್ರೀ ಗಳಿಗೆ ನಿಂದನೆ ಮಾಡಿದ ವಿಡಿಯೋ ವೈರಲ್ ಆಗಿದೆ.
ವಿಡಿಯೋಗಾಗಿ…
ಈ ಬಗ್ಗೆ ಪ್ರತಿಕ್ರೀಯಿಸಿರುವ ಅಖಿಲ ಭಾರತ ಕಾರ್ಮಿಕ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸುದತ್ತ ಜೈನ್ ಕರಿಂಜೆ
ಶ್ರೀ ಮುಕ್ತಾನಂದ ಸ್ವಾಮೀಜಿಯವರಿಗೆ ಏಕವಚನದಲ್ಲಿ ನಿಂದಿಸಿರುವುದು ಖಂಡನೀಯವಾಗಿದೆ.
ಕೆ.ಅಭಯಚಂದ್ರ ಜೈನ್ ಅವರು ಸಮಾಜದ ಜವಾಬ್ದಾರಿಯುತ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಜನಪ್ರತಿನಿಧಿಯಾಗಿ ತಾಳ್ಮೆಯಿಂದ ಇರಬೇಕು.
ಒಳ್ಳೆಯದು ಕೆಟ್ಟದ್ದನ್ನು ಸಮಾನತೆಯಿಂದ ಸ್ವೀಕರಿಸಬೇಕು.ಮುಂದಿನ ಬಾರಿ ಚುಣಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದ ಮಾತ್ರಕ್ಕೆ ಎಲ್ಲವೂ ಮುಗಿಯುವುದಿಲ್ಲ.
ಯಾವುದೇ ವ್ಯಕ್ತಿಗೂ ಗೌರವ ನೀಡುವುದು ಕಾಂಗ್ರೆಸ್ ಸಂಸ್ಕಾರವಾಗಿದೆ.
ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲವಾಗಿದೆ ಎಂಬುದನ್ನು ವಿವಿಧ ಪ್ರಕರಣಗಳಲ್ಲಿ ಎತ್ತಿ ತೋರಿಸುತ್ತಿರುವುದು ನಮಗೆಲ್ಲ ತಿಳಿದ ವಿಚಾರವಾಗಿದೆ.
ಮುಂಗೋಪ,ಹಿತ್ತಾಳೆ ಕಿವಿ ಎಲ್ಲವನ್ನೂ ನಾಶ ಮಾಡುತ್ತದೆ. ಕಾಂಗ್ರೆಸ್ ಸಂಸ್ಕೃತಿಯನ್ನು ನಾಶ ಮಾಡುತ್ತಿದೆ ಎಂದು ಹೇಳಿದ್ದಾರೆ.
You must be logged in to post a comment Login