ಉಡುಪಿ, ಆಗಸ್ಟ್ 23 : ಜಿಲ್ಲಾ ಪಂಚಾಯತ್ ಅಧ್ಯಕ್ಷರ ಕಾರು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಸಾವಿಗೀಡಾದ ಘಟನೆ ಉಡುಪಿಯ ಕಾಪು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಮೃತರನ್ನು ಸ್ಥಳೀಯ ಭರತ ನಗರ ನಿವಾಸಿ ಚಂದು ಮೇಸ್ತ್ರಿ ಎಂದು ಗುರುತ್ತಿಸಲಾಗಿದೆ.ಈತ ರಸ್ತೆ ದಾಟುತಿದ್ದಾಗ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಅವರ ಇಲಾಖಾ ವಾಹನ ಚಂದು ಅವರಿಗೆ ಢಿಕ್ಕಿ ಹೊಡೆದಿದ್ದು, ತಕ್ಷಣ ಗಾಯಾಳುವನ್ನು ತಮ್ಮ ವಾಹನದಲ್ಲಿ ಅಧ್ಯಕ್ಷರು ಜಿಲ್ಲಾ ಆಸ್ಪತ್ರೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕಾಪು ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.