Connect with us

LATEST NEWS

ಚಪ್ಪಲ್ ಸೋಲ್ ನಲ್ಲಿ ಚಿನ್ನ ಸಾಗಾಟ – ಒರ್ವನ ಬಂಧನ

ಚಪ್ಪಲ್ ಸೋಲ್ ನಲ್ಲಿ ಚಿನ್ನ ಸಾಗಾಟ – ಒರ್ವನ ಬಂಧನ

ಮಂಗಳೂರು ನವೆಂಬರ್ 27: ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ವಿಭಾಗದ ಡಿಆರ್ ಐ ಅಧಿಕಾರಿಗಳು ಅಕ್ರಮ ಚಿನ್ನ ಸಾಗಾಟ ಪತ್ತೆ ಹಚ್ಚಿದ್ದಾರೆ. ನಿನ್ನೆ ದುಬೈಯಿಂದ ಮಂಗಳೂರಿಗೆ ಆಗಮಿಸಿದ ಪ್ರಯಾಣಿಕನೋರ್ವನನ್ನು ತನಿಖೆಗೆ ಒಳಪಡಿಸಿದಾಗ ಈ ಅಕ್ರಮ ಚಿನ್ನ ಸಾಗಾಟ ಬಯಲಾಗಿದೆ.

ಕಾಸರಗೋಡು ನಿವಾಸಿ ಅಹ್ಮದ್ ತಾಹೀರ್ ನಿನ್ನೆ ದುಬೈಯಿಂದ IX814 ವಿಮಾನ ಮೂಲಕ ಮಂಗಳೂರಿಗೆ ಬಂದಿಳಿದಿದ್ದ ತಾಹಿರ್ ವರ್ತನೆ ಬಗ್ಗೆ ಅನುಮಾನಗೊಂಡ ಡಿ ಆರ್ ಐ ಅಧಿಕಾರಿಗಳು ಆತನನ್ನು ತನಿಖೆಗೆ ಒಳಪಡಿಸಿದ್ದಾರೆ.

ಈ ಸಂದರ್ಭದಲ್ಲಿ ತಾಹಿರ್ ಧರಿಸಿದ್ದ ಚಪ್ಪಲ್ ನ ಸೋಲ್ ಒಳಗಡೆ ಚಿನ್ನ ಸಾಗಾಟ ಪತ್ತೆಯಾಗಿದೆ. ಚಪ್ಪಲ್ ನ ಸೋಲ್ ನಲ್ಲಿ ಅಡಗಿಸಿಟ್ಟಿದ್ದ 804 ಗ್ರಾಂ ಚಿನ್ನವನ್ನು ಡಿಆರ್ ಐ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಚಿನ್ನದ ಒಟ್ಟು ಮೌಲ್ಯ 24 ಲಕ್ಷ ಎಂದು ಅಂದಾಜಿಸಲಾಗಿದೆ. ಅಹಮ್ಮದ್ ತಾಹಿರ್ ವಶಕ್ಕೆ ಪಡೆದ ಡಿಆರ್ ಐ ಅಧಿಕಾರಿಗೆಳು ತನಿಖೆ ಮುಂದುವರೆಸಿದ್ದಾರೆ.