Connect with us

    LATEST NEWS

    ಕಡವೆ ತಪ್ಪಿಸಲು ಹೋಗಿ ಗೊಡೆಗೆ ಗುದ್ದಿದ ಬೈಕ್ – ಮಹಿಳೆ ಸಾವು

    ಕಡವೆ ತಪ್ಪಿಸಲು ಹೋಗಿ ಗೊಡೆಗೆ ಗುದ್ದಿದ ಬೈಕ್ – ಮಹಿಳೆ ಸಾವು

    ಪುತ್ತೂರು ಡಿಸೆಂಬರ್ 27: ಕಡವೆಯೊಂದು ಬೈಕ್ ಗೆ ಅಡ್ಡ ಬಂದ ಹಿನ್ನಲೆಯಲ್ಲಿ ಬೈಕ್ ನಿಯಂತ್ರಣ ತಪ್ಪಿ ಮಹಿಳೆಯೊರ್ವರು ಸಾವನಪ್ಪಿದ ಘಟನೆ ನಡೆದಿದೆ.

    ಪುತ್ತೂರಿನ ಕಡಬದ ಸಮೀಪ ಬಲ್ಯದಲ್ಲಿ ಈ ಘಟನೆ ನಡೆದಿದೆ. ಬೈಕ್ ನಲ್ಲಿ ತೆರಳುತ್ತಿರುವಾಗ ಕಡವೆಯೊಂದು ಅಡ್ಡ ಬಂದಿದೆ. ಕಡವೆ ತಪ್ಪಿಸಲು ಪ್ರಯತ್ನ ಪಟ್ಟ ಸಂದರ್ಭದಲ್ಲಿ ಬೈಕ್ ನಿಯಂತ್ರಣ ತಪ್ಪಿ ಗೊಡೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ನ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ಸಾವನಪ್ಪಿದ್ದಾರೆ. ಮೃತ ಮಹಿಳೆಯನ್ನು ಸಾವಿತ್ರಿ ಎಂದು ಗುರುತಿಸಲಾಗಿದೆ,ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply