Connect with us

  LATEST NEWS

  ಗಾಂಜಾ ಆರೋಪಿಗಳಿಗೆ 1 ವರ್ಷ 6 ತಿಂಗಳು ಜೈಲು – ಮಂಗಳೂರು ವಿಶೇಷ ನ್ಯಾಯಾಲಯ

  ಮಂಗಳೂರು ಅಗಸ್ಟ್ 31 : ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳಿಗೆ ಮಂಗಳೂರಿನ ವಿಶೇಷ ನ್ಯಾಯಾಲಯ ಶಿಕ್ಷೆ ನೀಡಿ ತೀರ್ಪು ನೀಡಿದೆ. ನರಿಂಗಾನ ತೌಡುಗೋಳಿಯ ಹಫೀಝ್ , ಮಂಜೇಶ್ವರ ಉಪ್ಪಳದ ಮಹಮ್ಮದ್ ಸಿರಾಜ್, ಬೆಳ್ಮ ರೆಂಜಾಡಿಯ ಮಹಮ್ಮದ್ ಇಮ್ತಿಯಾಜ್  ಅವರಿಗೆ ಮಾದಕ ದ್ರವ್ಯ ಕಾಯ್ದೆಯಡಿಯ ವಿಶೇಷ ನ್ಯಾಯಾಲಯ 1 ವರ್ಷ 6 ತಿಂಗಳು ಜೈಲು ಶಿಕ್ಷೆ ಮತ್ತು 15 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

  ಪ್ರಕರಣ ಹಿನ್ನಲೆ

  2016ರ ಮೇ 10ರಂದು ಕುರ್ನಾಡು ಹೂವಿನ ಕೊಪ್ಪಲದಿಂದ ಬೈಕ್‍ನಲ್ಲಿ ಆರೋಪಿಗಳಿಂದ ಅಕ್ರಮ ಗಾಂಜಾ ಸಾಗಾಟ ಪ್ರಕರಣ ಕ್ಕೆ ಸಂಬಂಧಿಸಿದಂತೆ ಈ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಗಾಂಜಾ ಸಾಗಾಟದ ಖಚಿತ ಮಾಹಿತಿಯ ಮೇರೆಗೆ ದಾಳಿ‌ ನಡೆಸಿದ್ದ ಕೋಣಾಜೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಬಂಧಿತ ಮೂವರು ಆರೋಪಿಗಳಿಂದ 1ಕೆಜಿ 100ಗ್ರಾಂ ಗಾಂಜಾ, 1 ತಲವಾರ ನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈ ಪ್ರಕರಣದ ಕುರಿತು ತನಿಖೆ ನಡೆಸಿದ ಮಂಗಳೂರಿನ ವಿಶೇಷ ನ್ಯಾಯಾಲಯ ಆರೋಪಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

  Share Information
  Advertisement
  Click to comment

  You must be logged in to post a comment Login

  Leave a Reply