Connect with us

  DAKSHINA KANNADA

  ಮಂಗಳೂರಿನಲ್ಲಿ ಸಂಭ್ರಮ ಸಡಗರದ ಬಕ್ರೀದ್ ಆಚರಣೆ

  ಮಂಗಳೂರು, ಸೆಪ್ಟೆಂಬರ್ 01 : ತ್ಯಾಗ ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಕರಾವಳಿ ನಗರ  ಮಂಗಳೂರಿನಲ್ಲಿಯೂ ಮುಸ್ಲಿಂ ಬಾಂಧವರು ಸಡಗರದಿಂದ ಬಕ್ರೀದ್ ಆಚರಿಸಿದರು . ಕರಾವಳಿಯಲ್ಲಿ ಒಂದು ದಿನ ಮೊದಲೇ ಚಂದ್ರದರ್ಶನ ವಾಗಿರುವ ಹಿನ್ನೆಲೆಯಲ್ಲಿ ಕೇರಳ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಬಕ್ರೀದ್ ಅಥವಾ ಈದುಲ್ ಅಝ್ ಹಾ ವನ್ನು ಆಚರಿಸಲಾಗುತ್ತಿದೆ .

    ಮಂಗಳೂರಿನಲ್ಲಿ ಹಬ್ಬದ ಸಡಗರ : ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಮಂಗಳೂರಿನ ಬಾವುಟ ಗುಡ್ಡಾ ಈದ್ಗಾ ಮಸೀದಿಯಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಇಂದು ಬೆಳಗ್ಗೆ  ಆಯೋಜಿಸಿದ್ದ  ಸಾಮೂಹಿಕ ಪ್ರಾರ್ಥನೆಯಲ್ಲಿ  ಪಾಲ್ರುಗೊಂಡರು . ಕ್ಷಿಪ್ರ ಪ್ರಹಾರ ದಳ, ಕೆಎಸ್ ಆರ್ ಪಿ ಪೊಲೀಸ್ ಪಡೆಗಳ ಬಿಗಿ ಭದ್ರತೆಯ ನಡುವೆ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು . ಸಂಭ್ರಮ ಸಡಗರದ ದೊಡ್ಡ ಹಬ್ಬ ಬಕ್ರೀದ್ ಕುರಿತು ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ಕೋರಿದರು .ಮಂಗಳೂರು ನಗರ ಪೋಲಿಸ್ ಆಯುಕ್ತರಾದ ಟಿ. ಸುರೇಶ್, ಶಾಸಕ ಜೆ. ಆರ್ ಲೋಬೊ ಸಹಿತ ಆನೇಕ ಗಣ್ಯರು  ಆಗಮಿಸಿ ಶುಭಾಶಯ ಸಲ್ಲಿಸಿದರು.

   ಬಕ್ರೀದ್ ಹಬ್ಬದ ಹಿನ್ನೆಲೆ : ಬಲಿದಾನದ ಪ್ರತೀಕವಾದ ಮುಸಲ್ಮಾನ ಬಾಂಧವರ ದೊಡ್ಡ ಹಬ್ಬ ಬಕ್ರೀದ್ ಅಥವಾ ಈದುಲ್ ಅಝ್ ಹಾ ವನ್ನು ಜಗತ್ತಿನಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ . ಮಕ್ಕಾ ನಗರದಲ್ಲಿರುವ ಕಾಬಾ ಭವನಕ್ಕೆ ಪ್ರತಿ ವರ್ಷ ಹಜ್ ಯಾತ್ರೆ ಕೈಗೊಳ್ಳುವ ಮತ್ತು ಅದರ ಪರಿಸರದಲ್ಲಿ ಬಲಿದಾನ ನೀಡುವ ಸರಿಯಾದ ಕ್ರಮವನ್ನು ಪ್ರವಾದಿ ಮಹಮ್ಮದ್ ಪ್ರಾಯೋಗಿಕವಾಗಿ ಮಾಡಿ ತೋರಿಸಿದ್ದರು . ಪವಿತ್ರ ಹಜ್ ಯಾತ್ರೆಯು ಇಸ್ಲಾಮಿನ ವಿಶ್ವ ಭ್ರಾತೃತ್ವದ ಸಂಕೇತವಾಗಿ ಹಾಗೂ ಬಲಿದಾನದ ನೆನಪಿಗಾಗಿ ಬಕ್ರೀದ್ ಆಚರಿಸಲಾಗುತ್ತದೆ .

  ವಿಡಿಯೋಗಾಗಿ ಲಿಂಕನ್ನು ಒತ್ತಿರಿ..

  Share Information
  Advertisement
  Click to comment

  You must be logged in to post a comment Login

  Leave a Reply