Connect with us

DAKSHINA KANNADA

ಗರ್ಲ್ ಫ್ರೆಂಡ್ ಗಳೊಂದಿಗೆ ಜಗಳ – ಬಾಯ್ ಫ್ರೆಂಡ್ ನ ವಂಚನೆ ಜಾಲ ಬಯಲು

ಗರ್ಲ್ ಫ್ರೆಂಡ್ ಗಳೊಂದಿಗೆ ಜಗಳ – ಬಾಯ್ ಫ್ರೆಂಡ್ ನ ವಂಚನೆ ಜಾಲ ಬಯಲು

ಮಂಗಳೂರು ಅಗಸ್ಟ್ 7: ಸಾಮಾಜಿಕ ಜಾಲತಾಣದಲ್ಲಿ ಫಾರೀನ್ ಹುಡುಗಿಯರ ಆಸೆ ತೋರಿಸಿ ವಂಚಿಸುತ್ತಿದ್ದ ಇಬ್ಬರು ಖದೀಮರನ್ನು ಮಂಗಳೂರಿನ ಪಾಂಡೇಶ್ವರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಎಕ್ಕೂರು ನಂದಿಗುಡ್ಡೆಯ ಕುಲದೀಪ್, ಹಾಗೂ ಪರಂಗಿಪೇಟೆಯ ಕೀರ್ತನ್ ಎಂದು ಗುರುತಿಸಲಾಗಿದೆ.

ಫಾರೀನ್ ಹುಡುಗಿಯರ ಪೋಟೊಗಳನ್ನು ಸಾಮಾಜಿಕ ಜಾಲತಾಣ, ವಾಟ್ಸಪ್, ಫೇಸ್ಬುಕ ಸೇರಿದಂತೆ ಮೇಲ್ ಗಳ ಮೂಲಕ ಕಳುಹಿಸುತ್ತಿದ್ದ ಈ ಖದೀಮರು ಹುಡುಗಿಯರ ಆಸೆಗೆ ಆಸಕ್ತಿ ತೋರಿಸುತಿದ್ದ ಶ್ರೀಮಂತ ಹಾಗೂ ಎನ್ ಆರ್ ಐ ಗಳನ್ನು ಇವರು ವಂಚಿಸುತ್ತಿದ್ದರು.

ಮೇಲ್ ಹಾಗೂ ವಾಟ್ಸಪ್, ಫೇಸ್ಬುಕ್ ಸಂದೇಶಗಳಿಗೆ ಆಸಕ್ತಿ ತೋರುತಿದ್ದ ಗ್ರಾಹಕರಿಗೆ ಹುಡುಗಿಯರನ್ನು ಕಳುಹಿಸಲು ಅಡ್ವಾನ್ಸ್ 300 ಡಾಲರ್ ಗಳನ್ನು ತಮ್ಮ ಅಕೌಂಟ್ ಗೆ ಹಾಕಲು ತಿಳಿಸುತ್ತಿದ್ದರು.
ಹಣ ಅಕೌಂಟ್ ಗೆ ಬಂದ ಕೂಡಲೇ ಸಂಪರ್ಕ ಕಡಿತಗೊಳಿಸುತ್ತಿದ್ದ ಈ ಅಸಾಮಿಗಳು ಈವರೆಗೆ 50ಕ್ಕೂ ಹೆಚ್ಚು ಜನರಿಗೆ ವಂಚಿಸಿ 7 ಲಕ್ಷ ರೂಪಾಯಿ ಸಂಪಾದಿಸಿದ್ದಾರೆ.

ಪ್ರಕರಣ ಬೆಳಕಿಗೆ

ಈ ಪ್ರಕರಣ ಬೆಳಕಿಗೆ ಬಂದ ಬಗೆ ತುಂಬಾ ಇಂಟ್ರಸ್ಟಿಂಗ್.

ಕೀರ್ತನ್ ಗೆ ಒಬ್ಬಳು ಗರ್ಲ್ ಫ್ರೆಂಡ್ ಇದ್ದು ಶನಿವಾರ ರಾತ್ರಿ ಇವರಿಬ್ಬರು ಕುಡಿದ ಮತ್ತಿನಲ್ಲಿ ಜಗಳ ವಾಡಿದ್ದಾರೆ. ಈ ನಡುವೆ ಕೀರ್ತನ್ ತನ್ನ ಪ್ರೇಯಸಿಗೆ ಹೊಡೆದ ಪರಿಣಾಮ ಪ್ರೇಯಸಿ ರೊಚ್ಚಿಗೆದ್ದು ಪೊಲೀಸರಿಗೆ ಕರೆ ಮಾಡಿ ಹಲ್ಲೆ ನಡೆದಿರುವ ಕುರಿತು ಹಾಗೂ ಕೀರ್ತನ್ ನಡೆಸುತ್ತಿರುವ ವಂಚನೆಯ ಬಗ್ಗೆ ಕುಡಿದ ಮತ್ತಿನಲ್ಲಿ ಬಾಯಿ ಬಿಟ್ಟಿದ್ದಾಳೆ. ಶನಿವಾರ ರಾತ್ರಿ ಕುಡಿದು ಹಲ್ಲೆ ಪ್ರಕರಣದಲ್ಲಿ ಬಂಧಿಸಿದ್ದಾರೆ. ಭಾನುವಾರ ಪ್ರಿಯಕರನ ಕುರಿತು ವಿಚಾರಣೆಗೆ ಬಂದ ಸಂದರ್ಭದಲ್ಲಿ ಪೊಲೀಸರು ಪ್ರಕರಣದ ಕುರಿತು ಸುಧೀರ್ಘ ವಿಚಾರಣೆ ನಡೆಸಿದಾಗ ಈ ವಂಚನೆ ಜಾಲದ ಪ್ರಕರಣ ಬೆಳಕಿಗೆ ಬಂದಿದೆ.

Share Information
Advertisement
Click to comment

You must be logged in to post a comment Login

Leave a Reply