Connect with us

DAKSHINA KANNADA

ಖಗ್ರಾಸ ಚಂದ್ರಗ್ರಹಣ- ಕರಾವಳಿಯ ದೇವಸ್ಥಾನಗಳು ಬಂದ್

Share Information

ಮಂಗಳೂರು ಅಗಸ್ಟ್ 6 : ಕರಾವಳಿಯ ದೇವಾಲಯಗಳು ಎಂದು ಅವಧಿಗೆ ಮುಂಚೆಯೇ ಬಾಗಿಲು ಹಾಕಲಿವೆ. ಇಂದು ಖಗ್ರಾಸ ಚಂದ್ರಗ್ರಹಣ ಹಿನ್ನೆಲೆಯಲ್ಲಿ ಕರಾವಳಿಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ಶ್ರೀ ಕ್ಷೇತ್ರ ಧರ್ಮಸ್ಥಳ, ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ , ಶ್ರೀ ಕ್ಷೇತ್ರ ಕಟೀಲು ಸೇರಿದಂತೆ ಕರಾವಳಿಯ ದೇವಾಲಯಗಳು ಇಂದು ಅವಧಿಗೆ ಮುನ್ನವೇ ಬಾಗಿಲು ಹಾಕಲಿವೆ .

ಶ್ರೀ ಕ್ಷೇತ್ರ ಧರ್ಮಸ್ಥಳ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಚಂದ್ರಗ್ರಹಣ ಹಿನ್ನೆಲೆಯಲ್ಲಿ ವಿಶೇಷ ಪೂಜೆ ನಡೆಸಲಾಯಿತು. ಪ್ರತಿದಿನ ರಾತ್ರಿ 8.30 ಬದಲಾಗಿ ಇಂದು 8 ಗಂಟೆಗೆ ದೇವಾಲಯ ಬಾಗಿಲು ಹಾಕಲಿದೆ .

ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ

ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ದೇವರ ದರ್ಶನ ಸಂಜೆ 6 ಗಂಟೆಗೆ ಸ್ಥಗಿತಗೊಳ್ಳಲಿದೆ . ಶ್ರೀ ಕ್ಷೇತ್ರ ಕಟೀಲು ದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ಇಂದು ಅವಧಿಗೆ ಮುನ್ನವೇ ದೇವಾಲಯ ಬಾಗಿಲು ಹಾಕಲಿದೆ .

ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ಇಂದು ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿದ್ದು ರಾತ್ರಿ 8 ಗಂಟೆಯ ಬದಲಾಗಿ ಎಂದು ಸಂಜೆ 5 ಗಂಟೆಗೆ ದೇವಾಲಯ ಬಾಗಿಲು ಹಾಕಲಿದೆ


Share Information
Advertisement
Click to comment

You must be logged in to post a comment Login

Leave a Reply