ಹಾಡುಗಾರ್ತಿ, ನೃತ್ಯಗಾರ್ತಿ, ಹಾಗೂ ಬಹು ಭಾಷಾ ಚಿತ್ರ ನಟಿ ಎಸ್ತೆರ್ ನೊರೊನ. ಮೂಲತ ಮಂಗಳೂರಿನವರಾದ ಎಸ್ತೆರ್ ನೊರೊನ 1992 ಸೆಪ್ಟೆಂಬರ್ 12 ರಂದು ಜನಿಸಿದರು. ಬಾಲ್ಯ ಹಾಗೂ ಹೈಸ್ಕೂಲ್ ವರೆಗಿನ ಶಿಕ್ಷಣವನ್ನು ಮಂಗಳೂರಿನಲ್ಲೇ ಪಡೆದ ನಂತರ ಮುಂಬೈಯಲ್ಲಿ ಉನ್ನತ ಶಿಕ್ಷಣ ಮುಂದುವರೆಸಿದರು. ಅತ್ಯುತ್ಮ ಭರತನಾಟ್ಯ ಕಲಾವಿದೆಯೂ ಆದ ಎಸ್ತೆರ್ 2012 ರಿಂದ ವೃತ್ತಿ ಜೀವನಕ್ಕೆ ಕಾಲಿಟ್ಟರು. ತಮಿಳ್, ತೆಲುಗು, ಕನ್ನಡ, ಹಿಂದಿ, ಕೊಂಕಣಿ, ತುಳು ಹೀಗೆ ಅನೇಕ ಭಾಷೆಗಳ ಚಲನಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

0 Shares

Facebook Comments

comments