LATEST NEWS
ಕೃಷ್ಣ ಮಠದ ಬಗ್ಗೆ ನನಗೆ ಯಾವುದೇ ಧ್ವೇಷವಿಲ್ಲ – ಮುಖ್ಯಮಂತ್ರಿ ಸಿದ್ದರಾಮಯ್ಯ
ಕೃಷ್ಣ ಮಠದ ಬಗ್ಗೆ ನನಗೆ ಯಾವುದೇ ಧ್ವೇಷವಿಲ್ಲ – ಮುಖ್ಯಮಂತ್ರಿ ಸಿದ್ದರಾಮಯ್ಯ
ಉಡುಪಿ ನವೆಂಬರ್ 19: ಸಿಎಂ ಸಿದ್ದರಾಮಯ್ಯ ವಿವಿಧ ಕಾರ್ಯಕ್ರಮಗಳ ಉದ್ಘಾಟನೆಗೆ ಇಂದು ಉಡುಪಿಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಈ ಭಾರಿ ನನಗೆ ಯಾವುದೇ ಆಹ್ವಾನ ಬಂದಿಲ್ಲ ಆ ಹಿನ್ನಲೆಯಲ್ಲಿ ನಾನು ಕೃಷ್ಣ ಮಠಕ್ಕೆ ಹೋಗುವುದಿಲ್ಲ ಎಂದರು. ಉದ್ದೇಶ ಪೂರ್ವಕವಾಗಿ ಹೋಗದೇ ಇರುವುದಲ್ಲ ಎಂದು ಹೇಳಿದ ಅವರು ನನಗ ಪೇಜಾವರ ಶ್ರೀಗಳ ಜೊತೆ ಮನಸ್ತಾಪ ಇಲ್ಲ ಎಂದು ತಿಳಿಸಿದರು.
ನನಗೆ ಕೃಷ್ಣ ಮಠದ ಹಗ್ಗೆ ಯಾವುದೇ ದ್ವೇಷ ಇಲ್ಲ ಎಂದು ಹೇಳಿದ ಅವರು, ಈ ಹಿಂದೆ ನಾನು ಮಠಕ್ಕೆ ಹೋಗಿದ್ದೆ ಎಂದು ತಿಳಿಸಿದರು. ನನಗೆ ಪೇಜಾವರ ಶ್ರೀಗಳ ಜೊತೆ ಯಾವುದೇ ಸಂಘರ್ಷ, ನಾನು ಶಿವಭಕ್ತನೂ ಹೌದು, ಕೃಷ್ಣ ಭಕ್ತನೂ ಹೌದು ನಾನು ದೇವನೊಬ್ಬ ನೇ ನಾಮ ಹಲವು ಎಂದು ನಂಬಿರುವನು ಎಂದು ಹೇಳಿದರು.
ಕಾಗಿನೆಲೆ ಸ್ವಾಮೀಜಿ ಉಡುಪಿ ಮಠ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರು ನಾನೇನೂ ಯಾರನ್ನೂ ಮಠಕ್ಕೆ ಹೋಗ್ಬೇಡಿ ಎಂದು ಹೇಳಲ್ಲ ಯಾರು ಬೇಕಾದರೂ ಮಠ ದೇವಸ್ಥಾನಕ್ಕೆ ಹೋಗ್ಬಹುದು ಅವರವರ ನಂಬಿಕೆಗೆ ಬಿಟ್ಟದ್ದು ಎಂದರು.
You must be logged in to post a comment Login