Connect with us

    DAKSHINA KANNADA

    ಕಾವ್ಯ ಸಾವಿನ ಸಮಗ್ರ ತನಿಖೆಗೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ

    ಮಂಗಳೂರು ಅಗಸ್ಟ್ 08: ಮೂಡಬಿದ್ರೆ ಅಳ್ವಾಸ್ ಕಾಲೇಜಿನ ವಿದ್ಯಾರ್ಥಿ ಕಟೀಲು ದೇವರಗುಡ್ದೆ ನಿವಾಸಿ ಕಾವ್ಯ ಸಾವಿನ ಸಮಗ್ರ ತನಿಖೆಗೆ ಒತ್ತಾಯಿಸಿ ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಕಟೀಲಿನ ಬಸ್ಸು ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿ ಮಾತನಾಡಿದ ಡಿ ವೈ ಎಫ್ ಐ ನ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಕಾವ್ಯ ನಿಗೂಢ ಸಾವಿನ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಹೇಳಿದರು.

    ಕಾವ್ಯ ಸಾವಿಗೆ ನ್ಯಾಯ ಬೇಕು , ಇದು ಅನುಮಾನಾಸ್ಪದ ಸಾವು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಎಂದು ಹೇಳಿದ ಅವರು ಶಿಕ್ಷಣ ಸಂಸ್ಥೆಗೆ ಕೆಸರೆಚುವ ಕೆಲಸ ಆಗುತ್ತಿದೆ, ಅಳ್ವರಿಗೆ ಈ ಪ್ರಕರಣದಿಂದ ಅಘಾತವಾಗಿದೆ, ಆದರೆ ಕಾವ್ಯ ಸಾವಿಗೆ ನ್ಯಾಯ ಸಿಗಬೇಕು ಎಂದು ಅಳ್ವರ ಪರವಾಗಿ ಸಭೆ ಸಮಾರಂಭಗಳು ನಡೆಯುತ್ತದೆ, ಕಾವ್ಯ ಸಾವಿಗೆ ನ್ಯಾಯ ಸಿಗಬೇಕು ಎಂದು ಹೇಳುವ ಜನ ಕಾವ್ಯ ಪರವಾಗಿ ನಿಲ್ಲದೆ ಅಳ್ವರ ಪರವಾಗಿ ನಿಂತಿದ್ದಾರೆ, ಇದು ದುರಂತ ಎಂದು ಅಭಿಪ್ರಾಯಪಟ್ಟರು.

    ಇಂದು ಕರಾವಳಿಯ ಜನ ಜಾತಿ ಧರ್ಮವನ್ನು ಮರೆತು ಕಾವ್ಯ ಪರ ನಿಂತಿದ್ದು ಅಭಿನಂದನೀಯ, ಅಳ್ವಾಸ್ ಶಿಕ್ಷಣ ಸಂಸ್ಥೆಯಿಂದ ಶಿಕ್ಷಣ ವ್ಯಾಪಾರೀಕರಣ ಆಗುತ್ತಿದೆ ಎಂದು ಅವರು ಆರೋಪಿಸಿದರು. ಅಳ್ವಾಸ್ ಸಂಸ್ಥೆಯಲ್ಲಿ 5 ಸರಕಾರಿ ಶಾಲೆಯ ಶಿಕ್ಷಕರು ಇದ್ದಾರೆ ಅದು ಕಾನೂನು ಬಾಹಿರ ಎಂದರು ಎಂದು ಹೇಳಿದರು.

    ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ದೇವದಾಸ್ ಮಾತನಾಡಿ ಕಾವ್ಯ ನಿಗೂಡ ಸಾವು ಅವಳ ತಂದೆ ತಾಯಿಗೆ ಮಾತ್ರವಲ್ಲ ಮಕ್ಕಳ ಪೋಷಕರಿಗೂ ಅಂತಕವನ್ನು ಉಂಟು ಮಾಡಿದೆ, ಕಾವ್ಯ ಸಾವಿಗೀಡಾದ ಹಿಂದಿನ ದಿನ ತನ್ನ ಹೆತ್ತವರ ಬಳಿ ಪೋನಿನಲ್ಲಿ ಮಾತಾಡುವಾಗ ಕಾವ್ಯ ಅತ್ಮಹತ್ಯೆ ಮಾಡುವವಳಲ್ಲ ಎಂಬುದು ತಿಳಿಯುತ್ತದೆ. ಎಂದು ಅವರು ಅಭಿಪ್ರಾಯಪಟ್ಟರು.

    ಈ ಸಂದರ್ಭ ದಲಿತ ಸಂಘರ್ಷ ಸಮಿತಿಯ ರಘು ಎಕ್ಕಾರು, ವಿವಿಧ ಸಂಘಟನೆಗಳ ಸುನಿಲ್ ಕುಮಾರ್ ಬಜಾಲ್, ಯಶವಂತ ಮರೋಳಿ, ದೀಪಕ್ ಕೋಟ್ಯಾನ್, ರೋಬರ್ಟ್ ರೋಸಾರಿಯೋ, ಕೃಷ್ಣಾನಂದ, ಸೀತಾರಾಮ್, ಬಾಸ್ಕರ್ , ಮ್ಯಾಕ್ಸಿನ್ ಪಿಂಟೋ ಸಭೆಯಲ್ಲಿ ಮಾತನಾಡಿದರು.ಕಾರ್ಯಕ್ರಮದ ಮುಂಚೆ ಕಟೀಲು ಪೆಟ್ರೋಲ್ ಪಂಪ್ ನಿಂದ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply