Connect with us

UDUPI

ಕಾನೂನು ಉಲ್ಲಂಘಿಸಬೇಡಿ- ಮರಳುಗಾರಿಕೆಯವರಿಗೆ ಸಚಿವರ ಎಚ್ಚರಿಕೆ

ಕಾನೂನು ಉಲ್ಲಂಘಿಸಬೇಡಿ – ಮರಳುಗಾರಿಕೆಯವರಿಗೆ ಸಚಿವರ ಎಚ್ಚರಿಕೆ

ಉಡುಪಿ, ನವೆಂಬರ್ 10: ಜಿಲ್ಲೆಯಲ್ಲಿ ಮರಳುಗಾರಿಕೆ ನಡೆಸುವವರು ಕಾನೂನು ಉಲ್ಲಂಘಿಸದೆ ಜಿಲ್ಲಾಡಳಿತ ವಿಧಿಸಿದ ಷರತ್ತುಗಳನ್ನು ಪಾಲಿಸಿ ಮರಳುಗಾರಿಕೆ ನಡೆಸಿ ಎಂದು ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸುವ ವೇಳೆ ಮನವಿ ಸಲ್ಲಿಸಲು ಬಂದ ಮರಳುಗಾರಿಕೆಯವರನ್ನು ಭೇಟಿ ಮಾಡಿದ ಸಚಿವರು, ಎನ್‍ಜಿಟಿಯಿಂದ ಬಂದ ನಿರ್ದೇಶನದಂತೆ ಜಿಲ್ಲಾಡಳಿತ ಮರಳುಗಾರಿಕೆ ನಡೆಸುವಾಗ ಪಾಲಿಸಬೇಕಾದ ಕಾನೂನಿನ ಬಗ್ಗೆ ಸಮಗ್ರ ಮಾಹಿತಿಯನ್ನು ಟೆಂಡರ್ ಪಡೆದವರಿಗೆ ನೀಡಿದ್ದು ಕಾನೂನು ಪಾಲನೆ ಹೊಣೆ ಮರಳುಗಾರಿಕೆ ನಡೆಸುವವರ ಮೇಲಿದೆ. ಈ ಸಂಬಂಧ ಅಗತ್ಯ ಬೇಡಿಕೆಗಳಿದ್ದಲ್ಲಿ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿ ಎಂದು ಸಚಿವರು ಹೇಳಿದರು.

Facebook Comments

comments