UDUPI
ನಿಷೇಧಾಜ್ಞೆ ಜಾರಿ ಮಾಡಿ ಟಿಪ್ಪು ಜಯಂತಿ ಆಚರಣೆ – ಪ್ರಮೋದ್ ಮಧ್ವರಾಜ್ ಗೈರು
ನಿಷೇಧಾಜ್ಞೆ ಜಾರಿ ಮಾಡಿ ಟಿಪ್ಪು ಜಯಂತಿ ಆಚರಣೆ – ಪ್ರಮೋದ್ ಮಧ್ವರಾಜ್ ಗೈರು
ಉಡುಪಿ ನವೆಂಬರ್ 10: ರಾಜ್ಯ ಸರಕಾರದ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಗೈರು ಹಾಜರಾಗುವ ಮೂಲಕ ಉಡುಪಿ ಉಸ್ತುವಾರಿ ಸಚಿವ ಪ್ರಮೋದ್ ಸರಕಾರಕ್ಕೆ ಮುಜುಗುರ ಉಂಟು ಮಾಡಿದ ಘಟನೆ ನಡೆದಿದೆ.
ರಾಜ್ಯ ಸರಕಾರಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ಟಿಪ್ಪು ಜಯಂತಿಯನ್ನು ರಾಜ್ಯದೆಲ್ಲಡೆ ಆಚರಿಸಲಾಗುತ್ತಿದೆ. ಪ್ರತಿಯೊಂದು ಜಿಲ್ಲೆಗಳಲ್ಲಿ ಸರಕಾರದ ಮಂತ್ರಿಗಳು ಹಾಗೂ ಸಚಿವರುಗಳು ಟಿಪ್ಪುಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ ಉಡುಪಿ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಗೈರು ಹಾಜರಾಗುವ ರಾಜ್ಯ ಸರಕಾರಕ್ಕೆ ಮುಜುಗರ ಉಂಟುಮಾಡಿದ್ದಾರೆ.
ಉಡುಪಿಯಲ್ಲಿ ಜಿಲ್ಲಾಡಳಿತ ಟಿಪ್ಪುಜಯಂತಿಯನ್ನು ಆಚರಿಸಲು 2 ದಿನಗಳ ನಿಷೇಧಾಜ್ಞೆಯನ್ನು ಜಾರಿಗೆ ತಂದಿತ್ತು. ಬಿಜೆಪಿಯ ವಿರೋಧಕ್ಕೆ ಸೆಡ್ಡು ಹೊಡೆದು ಟಿಪ್ಪು ಜಯಂತಿ ಆಚರಿಸಲು ಹೊರಟ ಸರಕಾರಕ್ಕೆ ಅವರದೇ ಮಂತ್ರಿ ಗೈರು ಹಾಜರಾಗುವ ಮೂಲಕ ರಾಜ್ಯಸರಕಾರಕ್ಕೆ ಮಖಭಂಗವಾಗಿದೆ.
ಸಚಿವರ ಇಂದಿನ ಜಿಲ್ಲಾ ಪ್ರವಾಸದ ಪ್ರಕಾರ ಬೆಳಿಗ್ಗೆ 10.30ಕ್ಕೆ ಮಣಿಪಾಲದ ರಜತಾದ್ರಿಯಲ್ಲಿ ನಡೆಯುವ ಟಿಪ್ಪುಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಆದರೆ ಸಚಿವರು ಬೆಳಿಗ್ಗೆ ಪಾಂಬೂರಿನಲ್ಲಿ ನಡೆದ ಕಾರ್ಯಾಗಾರದಲ್ಲಿ ಭಾಗವಹಿಸಿ ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಫೂರ್ವಭಾವಿ ಸಭೆಯಲ್ಲಿ ಭಾಗವಹಿಸಿದರು. ಇದರ ನಡುವೆ ಇದ್ದ ಟಿಪ್ಪುಜಯಂತಿ ಕಾರ್ಯಕ್ರಮದಲ್ಲಿ ಗೈರಾಗಿದ್ದರು.
ಪ್ರಮೋದ್ ಮಧ್ವರಾಜ್ ಟಿಪ್ಪುಜಯಂತಿ ಕಾರ್ಯಕ್ರಮಕ್ಕೆ ಗೈರು ಹಾಜಾರಾಗುತ್ತಿರುವುದು ಇದೇ ಮೊದಲಬಾರಿ ಅಲ್ಲ. ಈ ಹಿಂದೆಯೂ ಎರಡು ಬಾರಿ ಜಿಲ್ಲೆಯಲ್ಲಿ ನಡೆದ ಟಿಪ್ಪುಜಯಂತಿ ಕಾರ್ಯಕ್ರಮಗಳಿಗೆ ಅವರು ಗೈರಾಗಿದ್ದರು.
ಜಿಲ್ಲೆಯಲ್ಲಿ ಇದ್ದುಕೊಂಡೆ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಮುಸ್ಲಿಮ ಮುಖಂಡರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ಉದ್ದೇಶಪೂರ್ವಕವಾಗಿಯೇ ಟಿಪ್ಪುಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಆರೋಪಿಸಿದೆ. ಉಡುಪಿಯಲ್ಲಿ ಇದ್ದುಕೊಂಡೆ ದೇಶಕ್ಕಾಗಿ ಹೋರಾಡಿದ ದೇಶಪ್ರೇಮಿಯ ಬಗ್ಗೆ ಅಭಿಮಾನ ಇಲ್ಲದ ಇಂತಹ ಸಚಿವರಿಂದ ಜನಸಮುದಾಯ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹುಸೈನ್ ಕೋಡಿಬೆಂಗ್ರೆ ಪ್ರಶಿಸಿದ್ದಾರೆ.
Facebook Comments
You may like
ಆನೆಗೆ ಬೆಂಕಿ ಇಟ್ಟ ಪಾಪಿಗಳು! ಸುಟ್ಟ ನೋವು ತಾಳಲಾರದೆ ಆನೆ ಸಾವು
ಉಡುಪಿಯಲ್ಲಿ ಬಂಡಾಯ…ಬೆಂಗಳೂರಿನಲ್ಲಿ ಡಿಕೆಶಿ ಜೊತೆ ಪ್ರಮೋದ್ ಮಧ್ವರಾಜ್
ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಅನುಗ್ರಹದಿಂದ ಈ ದಿನದ ರಾಶಿಗಳ ಫಲಾಫಲವನ್ನು ತಿಳಿಯೋಣ.
ಪೂಜೆಯಲ್ಲಿ ಪಾಲ್ಗೊಂಡಿದ್ದ ಮೊಯ್ದಿನ್ ಬಾವಾರಿಗೆ ಜೀವ ಬೆದರಿಕೆ…!
ಧರ್ಮಬೋಧಕನಿಂದ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ
ಕಾಳಿದೇವಿಯ ಮಂತ್ರ ಪಠಣ ಪ್ರಯೋಜನ.
You must be logged in to post a comment Login