Connect with us

LATEST NEWS

ಕರ್ನಾಟಕದಲ್ಲಿ ದೀಪಿಕಾ ಪಡುಕೋಣೆ ಹಾಗೂ ಕುಟಂಬದವರಿಗೆ ಭದ್ರತೆ ನೀಡಲು ಸೂಚನೆ – ರಾಮಲಿಂಗಾ ರೆಡ್ಡಿ

ಕರ್ನಾಟಕದಲ್ಲಿ ದೀಪಿಕಾ ಪಡುಕೋಣೆ ಹಾಗೂ ಕುಟುಂಬದವರಿಗೆ ಭದ್ರತೆ ನೀಡಲು ಸೂಚನೆ – ರಾಮಲಿಂಗಾ ರೆಡ್ಡಿ

ಬೆಂಗಳೂರು ನವೆಂಬರ್ 20: ನಟಿ ದಿಪೀಕಾ ಪಡುಕೋಣೆ ಹಾಗೂ ಕುಟುಂಬಸ್ಥರಿಗೆ ಕರ್ನಾಟಕದಲ್ಲಿರುವಂತಹ ಸಂದರ್ಭದಲ್ಲಿ ಸೂಕ್ತ ಭದ್ರತೆ ನೀಡುವಂತೆ ರಾಜ್ಯ ಗೃಹ ಮಂತ್ರಿ ರಾಮಲಿಂಗಾ ರೆಡ್ಡಿ ಅವರು ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದಾರೆ.

ಸಂಜಯ್ ಲೀಲಾ ಬನ್ಸಾಲಿ ಅವರ ವಿವಾದಿತ ಪದ್ಮಾವತಿ ಚಲನಚಿತ್ರ ವಿವಾದ ಹಿನ್ನಲೆಯಲ್ಲಿ ಸಿನೆಮಾದಲ್ಲಿ ನಟಿಸಿರುವ ಕನ್ನಡ ನಟಿ ದಿಪೀಕಾ ಪಡುಕೋಣೆ ಅವರ ತಲೆ ಕತ್ತರಿಸಿದರೆ 10 ಕೋಟಿ ನೀಡುವುದಾಗಿ ಹರಿಯಾಣ ಬಿಜೆಪಿ ಮುಖಂಡನ ಹೇಳಿಕೆ ಮಾಧ್ಯಮದಲ್ಲಿ ವರದಿಯಾಗಿತ್ತು.

ಈ ಹಿನ್ನಲೆಯಲ್ಲಿ ಕರ್ನಾಟಕ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಕರ್ನಾಟಕ ಹೆಣ್ಣು ಮಗಳಾದ ದಿಪೀಕಾ ಪಡುಕೋಣೆ ಹಾಗೂ ಅವರ ಕುಟುಂಬಸ್ಥರು ಕರ್ನಾಟಕದಲ್ಲಿರುವಾಗ ಯಾವುದೇ ಅಹಿತಕರ ಘಟನೆ ನಡೆಯದಂತೆ ಅವರಿಗೆ ಭದ್ರತೆ ಒದಗಿಸಲು ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚಿಸಿದ್ದಾರೆ.

ದೀಪಿಕಾ ಪಡುಕೋಣೆ ಅವರ ತಲೆ ಕತ್ತರಿಸುವಂತಹ ಹೇಳಿಕೆಗಳು, ಕರೆಗಳು ಸೃಜನ ಶೀಲ ಸ್ವಾತಂತ್ರ್ಯದ ಹಕ್ಕು ಕಸಿದುಕೊಳ್ಳುವಂತಾಗಿದ್ದು ಅಲ್ಲದೆ ಅಪರಾಧ ಚಟುವಟಿಕೆಗೆ ಪ್ರಚೋದನೆ ನೀಡಿದಂತಾಗಿದ್ದು , ಶಿಕ್ಷಾರ್ಹ ಅಪರಾಧವಾಗಿರುತ್ತದೆ ಎಂದು ಗೃಹ ಸಚಿವರು ಪ್ರಕರಟಣೆಯಲ್ಲಿ ತಿಳಿಸಿದ್ದಾರೆ.