FILM
ಕನ್ನಡ ಬಿಗ್ ಬಾಸ್ ನ 5ನೇ ಆವೃತ್ತಿ ಪ್ರೋಮೋ ಶೂಟ್
ಬೆಂಗಳೂರು – ಬಹು ನಿರೀಕ್ಷಿತ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನ 5ನೇ ಆವೃತ್ತಿಗೆ ಕ್ಷಣಗಣನೆ ಶುರುವಾಗಿದೆ. ಕನ್ನಡ ಕಿರುತೆರೆಯಲ್ಲಿ ಅತಿದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್, ಕಲರ್ಸ್ ಕನ್ನಡ ವಾಹಿನಿ ಯಲ್ಲಿ ಮೂಡಿ ಬರಲಿದೆ. ಇದೀಗ ಬಂದ ಸುದ್ದಿಯಂತೆ ಕಿಚ್ಚ ಸುದೀಪ್ ಅವರ ಬಿಗ್ ಬಾಸ್ 5ನೇ ಆವೃತ್ತಿಯ ಪ್ರೋಮೋ ಶೂಟ್ ನಡೆಯುತ್ತಿದ್ದು ಇನ್ನು ಕೆಲವೆ ದಿನಗಳಲ್ಲಿ ಬಿಗ್ ಬಾಸ್ ಶುರುವಾಗಲಿದೆ. ಈ ಸಲದ ಬಿಗ್ ಬಾಸ್ ನಲ್ಲಿ ಯಾರಲ್ಲಾ ಇರಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಸೆಲೆಬ್ರೆಟಿಗಳಲ್ಲದೆ ಜನಸಾಮಾನ್ಯರು ಈ ಸಲದ ಬಿಗ್ ಬಾಸ್ ನಲ್ಲಿ ಇರಲಿದ್ದಾರೆ.
VIDEO
You must be logged in to post a comment Login