Connect with us

  LATEST NEWS

  ಒಂಟಿ ಮಹಿಳೆಯರೇ ಟಾರ್ಗೆಟ್: ವಿಕೃತಕಾಮಿ ಎರೆಸ್ಟ್

  ಒಂಟಿ ಮಹಿಳೆಯರೇ ಟಾರ್ಗೆಟ್: ವಿಕೃತಕಾಮಿ ಎರೆಸ್ಟ್

  ಮಂಗಳೂರು, ಸೆಪ್ಟೆಂಬರ್ 25 : ಮಂಗಳೂರು ಹೊರವಲಯದ ಸುರತ್ಕಲ್ ಪರಿಸರದ ಬಾಲಕಿಯರು ಹಾಗೆ ಮಹಿಳೆಯರಲ್ಲಿ ಆತಂಕ ಸೃಷ್ಟಿಸಿದ್ದ ವಿಕೃತ ಕಾಮಿಯೊಬ್ಬನನ್ನು ಸೆರೆ  ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ .

  ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಿಂದ ಒಂಟಿಯಾಗಿ ಮಹಿಳೆಯರು ಸೇರಿದಂತೆ ಶಾಲಾ ಬಾಲಕಿಯರು ತಿರುಗಾಡಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿತ್ತು .

  ಬೆಳಿಗ್ಗೆ , ಮಧ್ಯಾಹ್ನ ,ಸಂಜೆ , ರಾತ್ರಿ ಹೀಗೆ ಯಾವ ಹೊತ್ತಿನಲ್ಲಾದರೂ ತನ್ನ ದ್ವಿಚಕ್ರ ವಾಹನದಲ್ಲಿ ಬರುವ ವ್ಯಕ್ತಿ , ಒಳ ರಸ್ತೆಗಳಲ್ಲಿ ಒಂಟಿಯಾಗಿ ನಡೆದಾಡುವ ಶಾಲಾ ಬಾಲಕಿಯರು ಸೇರಿದಂತೆ ಮಹಿಳೆಯರು , ಯುವತಿಯರ ಮೇಲೆ ಎರಗುತ್ತಿದ್ದ.

  ಏಕಾಏಕಿ ಬಂದು ಎದೆಯ ಭಾಗವನ್ನು ಮುಟ್ಟಿ ಪರಾರಿಯಾಗುತ್ತಿದ್ದ . ಸುರತ್ಕಲ್ ನ ,ಹೊಸಬೆಟ್ಟು , ಜನತಾ ಕಾಲನಿ ,ಶಿವಗಿರಿ ,ಕಾಶಿಮಠ ರೋಡ್ , ಕಲ್ಯಾಣ ಮಂಟಪ ರೋಡ್,ಕಡಂಬೋಡಿ, ಚಿತ್ರಾಪುರ ಸೇರಿದಂತೆ ಇತರ ಒಳ ರಸ್ತೆಗಳಲ್ಲಿ ಅಜ್ಞಾತ ವ್ಯಕ್ತಿಯ ಆತಂಕ ಸೃಷ್ಟಿಯಾಗಿತ್ತು .

  ಈ ಕುರಿತು ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿದ ಪೊಲೀಸರು ಹೊಂಚು ಹಾಕಿ ಆರೋಪಿ ಸುರತ್ಕಲ್ ಗುಡ್ಡೆಕೊಪ್ಲುನಿವಾಸಿ ಶೋಧನ್ ಎಂಬವರನ್ನು ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ .

  ಆರೋಪಿ ಶೋಧನ್ ಬಂಧನದಿಂದ ಕಳೆದ ಒಂದು ತಿಂಗಳಿಂದ ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ಯುವತಿರು, ಮಹಿಳೆಯರು , ಹಾಗು ಶಾಲಾ ಬಾಲಕಿಯರಲ್ಲಿ ಸೃಷ್ಟಿಯಾಗಿದ್ದ ಆತಂಕ ಕಳೆದಂತಾಗಿದೆ.

  Share Information
  Advertisement
  Click to comment

  You must be logged in to post a comment Login

  Leave a Reply