ಸುಳ್ಯ, ಜುಲೈ 28 :ಜುಲೈ 27 ರಂದು ಸುಳ್ಯದ ಹಳೆ ಥಿಯೇಟರ್ ಬಳಿ ಪತ್ತೆಯಾದ ವ್ಯಕ್ತಿಯ ಶವಕ್ಕೆ ಸಂಬಂಧಿಸಿದಂತೆ ಸುಳ್ಯ ಪೋಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಸತ್ತ ವ್ಯಕ್ತಿಯ ಜೊತೆ ಇದ್ದಂತಹ ವ್ಯಕ್ತಿಯ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಸುಳ್ಯ ನಗರದ ಮಧ್ಯಭಾಗದಲ್ಲಿ ಈ ಶವ ಪತ್ತೆಯಾಗಿದ್ದು, ತಲೆ ಭಾಗಕ್ಕೆ ಬಿದ್ದ ಬಲವಾದ ಏಟಿನಿಂದಾಗಿ ವ್ಯಕ್ತಿ ಮೃತಪಟ್ಟಿರಬಹುದು ಎನ್ನುವ ಸಂಶಯದ ಹಿನ್ನಲೆಯಲ್ಲಿ ಪೋಲೀಸರು ಇದೀಗ ವ್ಯಕ್ತಿಯೋರ್ವನ ಪತ್ತೆಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಮೃತಪಟ್ಟ ವ್ಯಕ್ತಿ ಹಾಗೂ ಆತನ ಜೊತೆಗಿದ್ದ ವ್ಯಕ್ತಿ ಜುಲೈ 26 ರಂದು ಪರಸ್ಪರ ಜಗಳವಾಡುತ್ತಿದ್ದ ವಿಷಯವನ್ನು ಸ್ಥಳೀಯರು ಪೋಲೀಸರಿಗೆ ನೀಡಿರುವ ಹಿನ್ನಲೆಯಲ್ಲಿ ಇದೀಗ ಪೋಲೀಸರು ಅಪರಿಚಿತ ವ್ಯಕ್ತಿಯ ಶೋಧ ನಡೆಸುತ್ತಿದ್ದಾರೆ.

 

0 Shares

Facebook Comments

comments