LATEST NEWS
ಹಿಂದೂ ಧರ್ಮದ ವಿಭಜನೆ ಬೇಡ : ವಿರಕ್ತ ಮಠಾಧೀಶರಿಗೆ ಉಡುಪಿ ಪೇಜಾವರ ಶ್ರೀಗಳ ಸಲಹೆ
ಉಡುಪಿ, ಜುಲೈ 25 : ಹಿಂದೂ ಧರ್ಮದ ವಿಭಜನೆ ಬೇಡ ಎಂದು ಉಡುಪಿ ಪೇಜಾವರ ಶ್ರೀ ಗಳು ಸಲಹೆ ನೀಡಿದ್ದಾರೆ. ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪೇಜಾವರ ಶ್ರೀ ಗಳು ವೀರಶೈವ ಧರ್ಮದ ವಿಭಜನೆ ಸಲ್ಲದು ಮತ್ತು ಇದು ಸ್ವೀಕರಿಸಲು ಅರ್ಹ ವಿಚಾರವಲ್ಲ, ಬಸವಣ್ಣ ವೇದವನ್ನು ಕೆಲವೆಡೆ ಒಪ್ಪಿದ್ದಾರೆ ಮತ್ತು ಕೆಲವು ವಿಚಾರದಲ್ಲಿ ಟೀಕೆ ಮಾಡಿದ್ದಾರೆ ಆದರೆ ಬಸವಣ್ಣ ಶಿವನನ್ನು ಆರಾಧಿಸಲಿಲ್ಲವೇ ಎಂದು ಪ್ರಶ್ನೆ ಮಾಡಿದ ಶ್ರೀಗಳು ಶಿವನ ಆರಾಧನೆ ಮಾಡಿದ ಮೇಲೆ ಅವರು ಹಿಂದೂಗಳೇ ಆಗಿದ್ದಾರೆ ಎಂದರು. ಪಂಚ ಪೀಠಾಧಿಪತಿಗಳಿಗೂ ವಿಭಜನೆ ಒಪ್ಪಿಗೆಯಿಲ್ಲ, ವಿರಕ್ತ ಮಠಾಧೀಶರಿಗೆ ಈ ಬೆಳವಣಿಗೆ ಸರಿ ಅನ್ನಿಸಿಲ್ಲ.ನನ್ನ ಆಶಯದಲ್ಲಿ ರಾಜಕೀಯ ಉದ್ದೇಶ ಇಲ್ಲ, ಪಕ್ಷ, ರಾಜಕೀಯ ದೃಷ್ಟಿ ನನ್ನಲ್ಲಿ ಇಲ್ಲ.ಹಿಂದೂ ಸಮಾಜದ ಏಳಿಗೆಗೆ ಈ ಸಲಹೆ ಸೂಚನೆ ನೀಡುತ್ತಿದ್ದೇನೆ. ನಾನು ವೀರಶೈವ- ಲಿಂಗಾಯತ ಸಮಾಜದವ ಅಲ್ಲ, ನಾನು ಅವರ ಹಿತೈಷಿಯಾಗಿ ಈ ಸೂಚನೆ ನೀಡುತ್ತಿದ್ದೇನೆ.ಸಮಾಜದಲ್ಲಿ ಜಾತಿ ವ್ಯವಸ್ಥೆ ಬೇಕು ,ಆದರೆ ಎಲ್ಲರ ನಡುವೆ ಸಾಮರಸ್ಯ ಬೇಕೆಂದರು.ಮಠಾಧೀಶರಿಗೆ ವಿಘಟನೆ ಮಾಡುವ ಮನಸ್ಸಿಲ್ಲ ಆದರೆ ಅಲ್ಪ ಸಂಖ್ಯಾತರಾಗುವ ಉದ್ದೇಶವಿದೆ. ಈ ಉದ್ದೇಶದಿಂದ ಲಿಂಗಾಯತರ ಹೋರಾಟ ನಡೆಯುತ್ತಿದ್ದು, ಅಲ್ಪಸಂಖ್ಯಾತರಾಗುವುದು ಸುಲಭದ ಮಾತಲ್ಲ ಎಂದು ಹೇಳಿದ್ದಾರೆ.