Connect with us

UDUPI

ಸಂವಿಂಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಗೌರವ ನಮನ

ಉಡುಪಿ,ಜುಲೈ.20 : ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ಸಮಾಜ ಕಲ್ಯಾಣ ಇಲಾಖೆ ಹಾಗೂ ದಲಿತ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಬನ್ನಂಜೆಯ ನಾರಾಯಣಗುರು ಸಭಾಗೃಹದಲ್ಲಿ ಆಯೋಜಿಸಿದ್ದ ಸಂವಿಂಧಾನ ಶಿಲ್ಪಿ , ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರವರ 126 ತಮಗಿದೋ ನಮ್ಮ ಗೌರವ ನಮನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಜಿಲ್ಲಾಧಿಕಾರಿ ಮೇರಿ ಪ್ರಿಯಾಂಕ ಪ್ರಾನ್ಸಿಸ್ ಶಿಕ್ಷಣ,ಸಂಘಟಿತ ಹೋರಾಟದಲ್ಲಿ ಹೋರಾಟ ನನಗೆ ಬಹಳ ಪ್ರೀಯವಾದ ಶಬ್ದ. ಹೋರಾಟ ಎಂದರೆ ದೈಹಿಕ ಹೋರಾಟ ಅಲ್ಲ ನಮ್ಮ ಯೋಜನೆಗಳು, ಸರಿ ತಪ್ಪುಗಳ ವಿವೇಚನೆಯನ್ನು ಚಿಂತನ- ಮಂಥನ ಮಾಡುವುದು, ಆ ಮೂಲಕ ಅತ್ಯುತ್ತಮ ನಿರ್ಧಾರಗಳನ್ನು ಕಾರ್ಯರೂಪಕ್ಕೆ ತರುವುದು ಎಂದರು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಅಂಬೇಡ್ಕರ್ ಅವರು ಸರ್ವ ಕಾಲ ಸ್ಮರಣೀಯ ಮಹಾನ್ ವ್ಯಕ್ತಿ. ಅವರು ರಚಿಸಿದ ಸಂವಿಧಾನವೇ ಈ ದೇಶದ ಶ್ರೇಷ್ಠ ಗ್ರಂಥವಾಗಿದೆ ಎಂದವರು ತಿಳಿಸಿದರು. ಡಾ| ಬಿ.ಆರ್. ಅಂಬೇಡ್ಕರ್ ಅವರ ಕುರಿತು ಮಂಗಳೂರು ವಿವಿಯ ಉಪನ್ಯಾಸಕ ಪ್ರೊ| ಡಾ| ಉದಯ್ ಬಾರ್ಕೂರು ಅವರು ಉಪನ್ಯಾಸಗೈದರು.
ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್,ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ. ಬಾಲಕೃಷ್ಣ ಅವರು ಉಪಸ್ಥಿತರಿದ್ದರು.ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್.ಎನ್. ರಮೇಶ್ ಸ್ವಾಗತಿಸಿದರು.
ಕಾರ್ಯಕ್ರಮದ ಅಂಗವಾಗಿ ಚರ್ಮವಾದ್ಯಗಾರರಿಂದ ಚರ್ಮವಾದ್ಯ ಮೇಳ ನಡೆಯಿತು
ದಿನಾಂಕ ೨೧-೭-೨೦೧೭ ರಿಂದ ದಿನಾಂಕ ೨೩-೭-೨೦೧೭೪ ರವರೆಗೆ ಬೆಂಗಳೂರಿನ ಜಿ.ಕೆ.ವಿ.ಕೆ. ಕ್ಯಾಂಪಸ್ ನಲ್ಲಿ ಡಾ. ಅಂಬೇಡ್ಕರ್ ಅವರ ೧೨೬ನೇ ಜನ್ಮ ವರ್ಷಾಚರಣೆ ಅಂಗವಾಗಿ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *