LATEST NEWS
ಮುಖ್ಯಮಂತ್ರಿಗಳಿಂದ ಮೇಯರ್ ಕವಿತಾ ಸನೀಲ್ ಗೆ ಕರಾಟೆ ಪಂಚ್
ಮುಖ್ಯಮಂತ್ರಿಗಳಿಂದ ಮೇಯರ್ ಕವಿತಾ ಸನೀಲ್ ಗೆ ಕರಾಟೆ ಪಂಚ್
ಮಂಗಳೂರು ನವೆಂಬರ್ 04: ಮಹಿಳೆಯರು ದೌರ್ಜನ್ಯಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಕರಾಟೆ ಸಮರಕಲೆ ಕಲಿಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ ಮಂಗಳೂರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮಂಗಳೂರಿನ ನೆಹರು ಮೈದಾನ ದಲ್ಲಿ ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ಡೋ ಜೋ ವತಿಯಿಂದ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ಆಯೋಜಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ದೈಹಿಕ ದೌರ್ಜನ್ಯಗಳು ಅತಿಯಾಗುತ್ತಿದೆ. ಇದನ್ನು ತಡೆಗಟ್ಟಲು ಕರಾಟೆ ವಿದ್ಯೆ ಪರಿಣಾಮಕಾರಿಯಾಗಬಲ್ಲದು. ಸ್ವರಕ್ಷಣೆಗೆ ಕರಾಟೆಯು ಪ್ರಬಲ ಅಸ್ತ್ರ. ಕರಾಟೆಯಿಂದ ಮಹಿಳೆಯರು ಆತ್ಮವಿಶ್ವಾಸ ಮತ್ತು ಧೈರ್ಯ ಮೂಡಿ ಬರಲಿದೆ ಎಂದು ಅವರು ಹೇಳಿದರು.
ಪ್ರತೀ ಮಹಿಳೆಯು ಕರಾಟೆಪಟುವಾದರೆ ಸಮಾಜದಲ್ಲಿ ನಡೆಯುವ ದೌರ್ಜನ್ಯ ಹಾಗೂ ಕಾನೂನುಬಾಹಿರ ಚಟುವಟಿಕೆಗಳು ನಿಯಂತ್ರಣವಾಗಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು. ಮಂಗಳೂರಿನಲ್ಲಿ ರಾಷ್ಟ್ರಮಟ್ಟದ ಕರಾಟೆ ಪಂದ್ಯಾಟ ನಡೆಯುತ್ತಿರುವುದು ಶ್ಲಾಘನೀಯವಾಗಿದೆ. ದೇಶದ ವಿವಿಧ ಭಾಗಗಳಿಂದ ಕರಾಟೆ ಕ್ರೀಡಾಪಟುಗಳು ಮಂಗಳೂರಿನಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದು ರಾಜ್ಯಕ್ಕೂ ಹೆಮ್ಮೆಯ ವಿಷಯವಾಗಿದೆ. ಪಂದ್ಯಾಟ ಆಯೋಜಿಸುವಲ್ಲಿ ಮಂಗಳೂರು ಮೇಯರ್ ಕವಿತಾ ಸನಿಲ್ ಬಹಳಷ್ಟು ಶ್ರಮ ಪಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಶ್ಲಾಘಿಸಿದರು.
ಬಳಿಕ ಮುಖ್ಯಮಂತ್ರಿಗಳು ಕರಾಟೆ ಪಿಚ್‍ನಲ್ಲಿ ಪುಟಾಣಿ ಕರಾಟೆ ಪಟುಗಳಿಬ್ಬರಿಗೆ ಧ್ವಜ ನಿಶಾನೆ ತೋರಿಸುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಕರಾಟೆ ಪಿಚ್‍ನಲ್ಲಿ ಮೇಯರ್ ಕವಿತಾ ಸನಿಲ್ ಅವರೊಂದಿಗೆ ಕರಾಟೆ ಶೈಲಿ ಪ್ರದರ್ಶಿಸಿದರು.
VIDEO