LATEST NEWS
ಮಂಗಳೂರಿನಲ್ಲಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆಗೆ ಬಿಜೆಪಿ ಹಿಂದೂ ಪರ ಸಂಘಟನೆಗಳ ಯತ್ನ : ಬಂಧನ
ಮಂಗಳೂರಿನಲ್ಲಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆಗೆ ಬಿಜೆಪಿ ಹಿಂದೂ ಪರ ಸಂಘಟನೆಗಳ ಯತ್ನ : ಬಂಧನ
ಮಂಗಳೂರು, ಜನವರಿ 12 : ಆರ್ ಎಸ್ ಎಸ್ ಹಾಗೂ ಬಿಜೆಪಿಯವರು ಉಗ್ರರು ಎಂದು ಸಿಎಂ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆ ಖಂಡಿಸಿ ಹಿಂದೂ ಪರ ಸಂಘಟನೆಗಳು ಹಾಗೂ ಬಿಜೆಪಿ ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಭಯೋತ್ಪಾದಕರು ಯಾರು? ಸಿದ್ಧರಾಮಯ್ಯನವರೇ ಉತ್ತರಿಸಿ ಎಂಬ ಭಿತ್ತಿಫಲಕಗಳನ್ನು ಹಿಡಿದ ಪ್ರತಿಭಟನಕಾರರು ಸಿಎಂ ಸಿದ್ಧರಾಮಯ್ಯ, ಸಚಿವರಾದ ರಾಮಲಿಂಗರೆಡ್ಡಿ, ದಿನೇಶ್ ಗುಂಡೂರಾವ್ ವಿರುದ್ಧ ವಾಗ್ದಾಳಿ ನಡೆಸಿದರು.
ಡೌನ್ ಡೌನ್ ಸಿದ್ಧರಾಮಯ್ಯ, ಡೌನ್ ಡೌನ್ ಕಾಂಗ್ರೆಸ್, ಕಿಕ್ ಔಟ್ ಕಾಂಗ್ರೆಸ್ ಎಂದು ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು ಸಿದ್ದರಾಮಯ್ಯಗೆ ಹುಚ್ಚು ಹಿಡಿಯುವ ಸ್ಥಿತಿ ನಿರ್ಮಾಣವಾಗಿದ್ದರಿಂದ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ.
ವಾಜಪೇಯಿ, ಅಡ್ವಾನಿ, ಪ್ರಧಾನಿ ಮೋದಿಯಂತಹ ಮಹಾನ್ ನಾಯಕರು ಬಿಜೆಪಿಯಿಂದ ಬಂದಿದ್ದಾರೆ.
ರಮಾನಾಥ ರೈ ಎಸ್ಪಿಯನ್ನು ಕುಳ್ಳಿರಿಸಿ ಸಂಘಟನೆ ಪ್ರಮುಖರನ್ನು ಬಂಧಿಸುವಂತೆ ಗೂಂಡಾಗಿರಿ ಮಾಡಿದ್ದರು ಎಂದು ಆರೋಪಿಸಿದ ಪ್ರತಿಭಟನಾಕಾರರು ಪಿಎಫ್ ಐ ನಿಷೇಧ ಮಾಡುವುದಿಲ್ಲ ಎಂದು ಹೇಳಿಕೆ ನೀಡಿರುವ ವೇಣುಗೋಪಾಲ್ ಪಿಎಫ್ ಐ ಏಜೆಂಟಾ? ಎಂದು ಪ್ರಶ್ನಿಸಿದರು.
ಈ ಸಂಘಟನೆಗಳು ಯುವತಿಯರನ್ನು ಮತಾಂತರಿಸಿ ಉಗ್ರಗಾಮಿ ಸಂಘಟನೆಗಳಿಗೆ ಸೇರಿಸುತ್ತಾರೆ.
ಪಿಎಫ್ ಐ, ಕೆಎಫ್ ಡಿ ದೇಶದ್ರೋಹಿ ಸಂಘಟನೆಗಳಲ್ಲವೇ ಸಚಿವ ದಿನೇಶ್ ಗುಂಡೂರಾವ್ ಗೆ ಕಣ್ಣು ಕಿವಿ ಕೇಳುದಿಲ್ಲವೆಂದು ಕಾಣುತ್ತದೆ, ದಿನೇಶ್ ಗುಂಡೂರಾವ್ ಕೆಪ್ಪ ಆಗಿರಬೇಕು ಎಂದು ಕಿಡಿಕಾರಿದರು.
ಕಾಂಗ್ರೆಸ್ ಕಚೇರಿ ಮಂದೆ ಮಲಗಿ ಪ್ರತಿಭಟಿಸುತ್ತಿದ್ದ ಬಿಜೆಪಿ ಮುಖಂಡರನ್ನು ಬಂಧಿಸಿ ಪೋಲಿಸರು ಹೊತ್ತೊಯ್ದರು.
ಮುಂಜಾಗೃತಾ ಕ್ರಮವಾಗಿ ಕಾಂಗ್ರೆಸ್ ಕಚೇರಿಗೆ ಬಿಗಿ ಪೋಲಿಸ್ ಬಂದೋಬಸ್ತನ್ನು ಮಾಡಲಾಗಿದೆ.