MANGALORE
ಪೊಲೀಸ್ ಕ್ವಾರ್ಟಸ್ ಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ : ರಾಮಲಿಂಗಾ ರೆಡ್ಡಿ
ಪೊಲೀಸ್ ಕ್ವಾರ್ಟಸ್ ಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ : ರಾಮಲಿಂಗಾ ರೆಡ್ಡಿ
ಮಂಗಳೂರು,ಜನವರಿ 12 : ರಾಜ್ಯದಲ್ಲಿನ ಪೊಲೀಸ್ ಕ್ವಾರ್ಟಸ್ ಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಲಾಗುವುದು ಮತ್ತು ಹಳೇಯ ಪೋಲಿಸ್ ವಸತಿ ಗೃಹಗಳ ರಿಪೇರಿಗೆ ಮೊದಲ ಅದ್ಯತೆ ಎಂದು ರಾಜ್ಯ ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಮಂಗಳೂರಿನ ಶಕ್ತಿನಗರದಲ್ಲಿ ಪೊಲೀಸ್ ವಸತಿಗೃಹಕ್ಕೆ ಶಿಲಾನ್ಯಾಸಗೈದು ಅವರು ಮಾತನಾಡಿದರು.
ಮಂಗಳೂರಿನ ಶಕ್ತಿನಗರದಲ್ಲಿ ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿದ ಬಳಿಕ 6.90ಕೋಟಿ ರೂ. ವೆಚ್ಚದ ಪೊಲೀಸ್ ವಸತಿಗೃಹದ ಕಟ್ಟಡಕ್ಕೆ ಶಿಲಾನ್ಯಾಸಗೈದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಪೊಲೀಸರಿಗೆ ಹನ್ನೊಂದು ಸಾವಿರ ಮನೆ ನಿರ್ಮಾಣದ ಗುರಿ ಸರ್ಕಾರದ ಮುಂದಿದೆ.
ಇದರಲ್ಲಿ ಎರಡು ಸಾವಿರ ಮನೆ ಪೂರ್ಣಗೊಂಡಿದ್ದು, ನಾಲ್ಕು ಸಾವಿರ ಮನೆಗಳು ಅಭಿವೃದ್ಧಿ ಹಂತದಲ್ಲಿದೆ.
ಮುಖ್ಯವಾಗಿ ಹಳೇಯ ಪೋಲಿಸ್ ವಸತಿ ಗೃಹಗಳ ರಿಪೇರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಅವರು ಹೇಳಿದರು.
ಶಕ್ತಿ ನಗರದಲ್ಲಿ ನಿರ್ಮಾಣವಾಗುತ್ತಿರುವ ಈ ಕಟ್ಟಡದಲ್ಲಿ ಅಧಿಕಾರಿ, ಸಿಬ್ಬಂದಿಗಳು ಸೇರಿ ಒಟ್ಟು 32 ವಸತಿ ಗೃಹಗಳಿವೆ.
You must be logged in to post a comment Login