LATEST NEWS
ಭಾರೀ ಗಾಳಿಗೆ ದಡ ಸೇರಿದ ಮೀನುಗಾರಿಕಾ ದೋಣಿ – ಮೀನುಗಾರರು ಸೇಫ್
ಭಾರೀ ಗಾಳಿಗೆ ದಡ ಸೇರಿದ ಮೀನುಗಾರಿಕಾ ದೋಣಿ – ಮೀನುಗಾರರು ಸೇಫ್
ಮಂಗಳೂರು ಅಕ್ಟೋಬರ್ 26: ಇಂದು ಮುಂಜಾನೆ ಮೀನುಗಾರಿಕೆಗೆ ತೆರಳಿದ್ದ ಬದ್ರಿಯಾ ಹೆಸರಿನ ಮೀನುಗಾರಿಕಾ ದೋಣಿಯಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ ಈ ಹಿನ್ನೆಲೆಯಲ್ಲಿ ಕಡಲ ಮಧ್ಯೆ ಎಂಜಿನ್ ಬೆಲ್ಟ್ ಕೆಟ್ಟಿದ್ದ ಕಾರಣ ಅತ್ತ ಸಮುದ್ರಕ್ಕೆ ತೆರಳಲಾಗದೇ ಇತ್ತ ದಡಕ್ಕೂ ಮರಳಲಾಗದ ಪರಿಸ್ಥಿತಿಯಲ್ಲಿ ಮೀನುಗಾರರಿದ್ದರು.
ಈ ನಡುವೆ ಭಾರೀ ಗಾಳಿ ಬೀಸುತ್ತಿದ್ದ ಕಾರಣ ಮೀನುಗಾರರು ಅಪಾಯಕ್ಕೆ ಸಿಲುಕಿದ್ದರು. ಅಪಾಯದಲ್ಲಿ ಸಿಲುಕಿದ್ದ ಮೀನುಗಾರರ ಸಹಾಯಕ್ಕೆ ಸಂದೇಶ ರವಾನಿಸಿದ್ದರೂ ಸೂಕ್ತ ಸಮಯಕ್ಕೆ ಸಹಾಯ ದೊರಕಿಲ್ಲ, ಆದರೂ ಅದೃಷ್ಟ ಅನ್ನೋದು ಇದೆಯಲ್ಲ ಭಾರಿ ಗಾಳಿಯ ಹೊಡೆತಕ್ಕೆ ಸಿಲುಕಿದ ಮೀನುಗಾರಿಕಾ ದೋಣಿ ನೇರ ಬಂದು ದಡ ಸೇರಿದ ಹಿನ್ನೆಲೆಯಲ್ಲಿ ಮೀನುಗಾರರು ಪಾರಾಗಿದ್ದಾರೆ.