LATEST NEWS
ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಬೈಕ್ ಡಿಕ್ಕಿ ಹೊಡೆದ ರೌಡಿ ಶೀಟರ್ ಬಂಧನ
ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಬೈಕ್ ಡಿಕ್ಕಿ ಹೊಡೆದ ರೌಡಿ ಶೀಟರ್ ಬಂಧನ
ಮಂಗಳೂರು ಅಕ್ಟೋಬರ್ 26: ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರಕಡ ಜಂಕ್ಷನ್ ಬಳಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಬೈಕ್ ಡಿಕ್ಕಿ ಹೊಡೆದು ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಮಂಗಳೂರಿನ ಬಾವುಟಗುಡ್ಡೆ ರಸ್ತೆಯಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬಜ್ಪೆ ನಿವಾಸಿ ಅಬ್ದುಲ್ ಮುನೀರ್ @ ಮುನೀರ್, ಪ್ರಾಯ(22) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಯ ಮೇಲೆ ಹಲವಾರು ಕ್ರಿಮಿನಲ್ ಕೇಸ್ ಗಳು ಇದ್ದು, ಈತ 2015ರಲ್ಲಿ ಮಂಗಳೂರಿನ ಕಾರಾಗೃಹದಲ್ಲಿ ನಡೆದ ಗಣೇಶ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಯಾಗಿದ್ದು ಈ ಪ್ರಕರಣದಲ್ಲಿ 3 ತಿಂಗಳ ಹಿಂದೆ ಜಾಮೀನು ಪಡೆದಿದ್ದನು. ಬಂಧಿತ ಆರೋಪಿಯ ಬರ್ಕೆ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯ ರೌಡಿ ಶೀಟ್ ರ್ ಆಗಿದ್ದಾನೆ. ಮುಂದಿನ ತನಿಖೆಗೆಗಾಗಿ ಆರೋಪಿಯನ್ನು ಕಾವೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಘಟನೆ ವಿವರ
ದಿನಾಂಕ: 22-10-2017 ರಂದು ಮುಖ್ಯಮಂತ್ರಿಯವರು ದಕ್ಷಿಣ ಕನ್ನಡ ಜಿಲ್ಲೆ ಭೇಟಿಯ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಮುಖ್ಯಮಂತ್ರಿಯವರ ದಕ್ಷಿಣಕನ್ನಡ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಸಂಚಾರ ನಿರ್ವಹಣೆ ಕರ್ತವ್ಯದಲ್ಲಿದ್ದಾಗ ಮಂಗಳೂರು ನಗರ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರಕಡ ಜಂಕ್ಷನ್ ಬಳಿ ಈ ಘಟನೆ ನಡೆದಿದೆ. ಮಂಗಳೂರು ನಗರ ಸಂಚಾರ ಉತ್ತರ ಉಪವಿಭಾಗದ ಪೊಲೀಸ್ ನಿರೀಕ್ಷಕರಾದ ಮಂಜುನಾಥ ರವರು ಸಿಬ್ಬಂದಿಯವರ ಜೊತೆ ಮಂಗಳೂರು ನಗರ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರಕಡ ಜಂಕ್ಷನ್ ಬಳಿ ಸಂಚಾರ ಕರ್ತವ್ಯದಲ್ಲಿದ್ದ ಸಂಜೆ 6-30 ಗಂಟೆಗೆ ಬಜಪೆ ಕಡೆಯಿಂದ ಕಾವೂರು ಕಡೆಗೆ ಬೈಕ್ ನಲ್ಲಿ ಹೆಲ್ಮೆಟ್ ಧರಿಸದೇ ಬರುತ್ತಿದ್ದ ಬೈಕ್ ನ್ನು ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿಯವರಾದ ಚೆಲುವರಾಜ್ ರವರು ಬೈಕ್ ನ್ನು ನಿಲ್ಲಿಸುವಂತೆ ಸೂಚನೆ ನೀಡಿದಾಗ ಬೈಕ್ ಸವಾರನು ಬೈಕ್ ನ್ನು ಏಕಾಎಕಿ ಪೊಲೀಸ್ ಸಿಬ್ಬಂದಿವರಾದ ಚೆಲುವರಾಜ್ ಎಂಬವರಿಗೆ ಡಿಕ್ಕಿ ಹೊಡೆದು ಅವರಿಗೆ ಗಾಯಗೊಳಿಸಿ ಪರಾರಿಯಾಗಿದ್ದಾನೆ. ಗಾಯಗೊಂಡ ಪೊಲೀಸ್ ಸಿಬ್ಬಂದಿಯವರಾದ ಚೆಲುವರಾಜ್ ರವರು ಚಿಕಿತ್ಸೆ ಬಗ್ಗೆ ಮಂಗಳೂರು ಎ ಜೆ ಆಸ್ಪತ್ರೆಯಲ್ಲಿ ಒಳರೊಗಿಯಾಗಿ ದಾಖಲಾಗಿದ್ದರು. ಈ ಬಗ್ಗೆ ಸಂಚಾರ ಉತ್ತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದರಾದ ಮಂಜುನಾಥ ರವರು ನೀಡಿದ ದೂರಿನಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
You must be logged in to post a comment Login