LATEST NEWS
ಗುತ್ತಿಗೆ ಕಾಮಗಾರಿಯಲ್ಲಿ ಧರ್ಮಾಧಾರಿತ ಮೀಸಲಾತಿ ವಿರೋಧಿಸಿ ವಿಶ್ವಹಿಂದೂ ಪರಿಷತ್ ಬಜರಂಗದಳದಿಂದ ಪ್ರತಿಭಟನೆ

ಮಂಗಳೂರು ಎಪ್ರಿಲ್ 08: ರಾಜ್ಯ ಸರಕಾರ ಸರ್ಕಾರಿ ಗುತ್ತಿಗೆ ಕಾಮಗಾರಿಯಲ್ಲಿ 4% ಮತದಾರಿತ ಮೀಸಲಾತಿ ಮಸೂದೆಯನ್ನು ಜಾರಿಗೆ ತಂದಿರುವದನ್ನು ವಿರೋಧಿಸಿ ಮಂಗಳೂರಿನಲ್ಲಿ ವಿಶ್ವಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮಂಗಳೂರು ಮಿನಿವಿಧಾನ ಸೌಧ ಮುಂಭಾಗ ಪ್ರತಿಭಟನೆ ನಡೆಸಿದ ವಿಶ್ವಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ರಾಜ್ಯ ಸರ್ಕಾರದ ಸಂವಿಧಾನ ವಿರೋಧಿ… ಹಿಂದೂ ವಿರೋಧಿ… ನಡೆಯನ್ನು ಖಂಡಿಸಿದ ಪ್ರತಿಭಟನಾಕಾರರು ರಾಜ್ಯ ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ವಿಭಾಗ ಸಹಕಾರ್ಯದರ್ಶಿ ಶಿವಾನಂದ್ ಮೆಂಡನ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು, ಪ್ರಾಂತ ಸಹ ಸೇವಾ ಪ್ರಮುಖ ಗೋಪಾಲ್ ಕುತ್ತಾರ್, ಕಟೀಲ್ ದಿನೇಶ್ ಪೈ, ವಿಭಾಗ ಪ್ರಮುಖರಾದ ಪೊಳಲಿ ಗಿರಿಪ್ರಕಾಶ್ ತಂತ್ರಿ, ಜಿಲ್ಲಾ ಪ್ರಮುಖರಾದ ರವಿ ಅಸೈಗೋಳಿ, ಮನೋಹರ್ ಸುವರ್ಣ, ಗುರುಪ್ರಸಾದ್ ಕಡಂಬಾರ್, ನವೀನ್ ಕೊಣಾಜೆ, ಗುರುಪ್ರಸಾದ್ ಉಳ್ಳಾಲ್, ನವೀನ್ ಮೂಡುಶೆಡ್ಡೆ ಈ ಸಂದರ್ಭದಲ್ಲಿ ಉಪಸ್ಥಿತಿರಿದ್ದರು.
1 Comment