LATEST NEWS
ಬಾಸ್ಕರ್ ಶೆಟ್ಟಿ ಕೊಲೆ ಪ್ರಕರಣ ವಿಚಾರಣೆ ದಿನಾಂಕ ನಿಗದಿ – ಆರೋಪಿ ಪರ ವಕೀಲರಿಂದ ಆಕ್ಷೇಪ
ಬಾಸ್ಕರ್ ಶೆಟ್ಟಿ ಕೊಲೆ ಪ್ರಕರಣ ವಿಚಾರಣೆ ದಿನಾಂಕ ನಿಗದಿ – ಆರೋಪಿ ಪರ ವಕೀಲರಿಂದ ಆಕ್ಷೇಪ
ಉಡುಪಿ ನವೆಂಬರ್ 28: ಉಡುಪಿಯನ್ನು ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ವಿಚಾರಣೆ ದಿನಾಂಕವನ್ನು ಡಿಸೆಂಬರ್ 23 ಕ್ಕೆ ನಿಗದಿ ಪಡಿಸಿದ ಉಡುಪಿ ಜಿಲ್ಲಾ ಸತ್ರ ನ್ಯಾಯಲಯ ಅದೇಶ ನೀಡಿದೆ. ಪ್ರಕರಣದ ವಿಚಾರಣೆ ದಿನಾಂಕ ನಿಗದಿ ಪಡಿಸಿರುವುದಕ್ಕೆ ಆರೋಪಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೊಲೆ ಅರೋಪಿಗಳಾದ ರಾಜೇಶ್ವರಿ, ನಿರಂಜನ್ ಭಟ್ ಹಾಗೂ ನವನೀತ್ ಶೆಟ್ಟಿ ಜೊತೆ ವಿಡಿಯೋ ಕಾನ್ಪೆರೆನ್ಸ್ ಮೂಲಕ ವಿಚಾರಣೆ ನಡೆಸಿದ ಜಿಲ್ಲಾ ಸತ್ರ ನ್ಯಾಯಲಯ ನ್ಯಾಯಧೀಶ ವೆಂಕಟೇಶ್ ನಾಯಕ್ ಅವರು ಈ ಅದೇಶ ನೀಡಿದ್ದಾರೆ.
ಈ ಮೊದಲು ಅಕ್ಟೊಬರ್ 23 ರಂದು ನಡೆಸಿದ ವಿಚಾರಣೆ ವೇಳೆ ಅರೋಪಿಗಳು ತಮ್ಮ ಮೇಲಿರುವ ದೋಷಾರೋಪವನ್ನು ನಿರಾಕರಿಸಿದ್ದರು.
ಅರೋಪಿಗಳ ಪರ ವಕೀಲ ಅರುಣ್ ಗಾಣಿಗ ಪ್ರಕರಣದ ವಿಚಾರಣೆ ಅರಂಭಿಸಲು ದಿನ ನಿಗದಿ ಪಡಿಸಿದ ಆದೇಶ ವಿರುದ್ದ ಅಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿ ಓ ಡಿ ಇನ್ನೂ ತನಿಖೆ ಪೂರ್ಣಗೊಳಿಸಿಲ್ಲ ಅಲ್ಲದೆ ಹೆಚ್ವುವರಿ ಅರೋಪ ಪಟ್ಟಿಯನ್ನು ಕೂಡ ಸಲ್ಲಿಸಿಲ್ಲ ಎಂದು ಹೇಳಿದ ವಕೀಲರು, ಆರೋಪ ಪಟ್ಟಿ ಪೂರ್ಣವಾಗಿ ಸಲ್ಲಿಸದೇ ವಾದ ಮಂಡಿಸಲು ಅಸಾದ್ಯ ಎಂದರು, ಅಲ್ಲದೇ ತನಿಖೆ ಪೂರ್ಣಗೊಳ್ಳದ ಕಾರಣ ಹೈಕೋರ್ಟ್ ಮತ್ತು ಸುಪ್ರಿಂ ಕೋರ್ಟಿನಲ್ಲಿ ಕೊಲೆಯ ಪ್ರಮುಖ ಅರೋಪಿ ರಾಜೇಶ್ವರಿಗೆ ಜಾಮೀನು ಕೂಡ ಸಿಗದ ಹಿನ್ನಲೆಯಲ್ಲಿ ನ್ಯಾಯಲಯ ವಿಚಾರಣೆ ದಿನಾಂಕ ನಿಗದಿಪಡಿಸಿರುವುದಕ್ಕೆ ಅರೋಪಿ ಪರ ವಕೀಲರು ಅಕ್ಷೇಪ ವ್ಯಕ್ತಪಡಿಸಿದ್ದಾರೆ.