LATEST NEWS
ಬಾವರ ಗೆಲುವಿನ ಜವಾಬ್ದಾರಿ ಸಹೋದರ ಫಾರೂಕ್ ಅವರಿಗೆ ವಹಿಸಿದ ಖಾದರ್..!!
ಬಾವರ ಗೆಲುವಿನ ಜವಾಬ್ದಾರಿ ಸಹೋದರ ಫಾರೂಕ್ ಅವರಿಗೆ ವಹಿಸಿದ ಖಾದರ್..!!
ಉಳ್ಳಾಲದಿಂದ ಮಾಜಿ ಮೇಯರ್ ಅಶ್ರಫ್, ಉಳ್ಳಾಲದಿಂದ ಮುನೀರ್ ಕಾಟಿಪಳ್ಳ ಕಣದಿಂದ ಹಿಂದಕ್ಕೆ.
ಮಂಗಳೂರು,ಎಪ್ರಿಲ್ 22 : ಮಂಗಳೂರು ವಿಧಾನ ಸಭಾ ಕ್ಷೇತ್ರ ದಿಂದ ಮಾಜಿ ಮೇಯರ್ ಅಶ್ರಫ್ ಅವರ ಸ್ಪರ್ಧೆಗೆ ಜೆಡಿಸ್ ತಡೆ ಒಡ್ಡಿದೆ.
ಅಶ್ರಫರ ಈ ತಡೆಗೆ ಈ ಕಾಂಗ್ರೆಸ್ ಶಾಸಕರು ಹಾಗೂ ಆಹಾರ ಸಚಿವರಾಗಿದ್ದ ಯು.ಟಿ. ಖಾದರ್ ಕಾರಣರಾಗಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ತನ್ನ ಗೆಲುವಿಗಾಗಿ ಪ್ರಯತ್ನಿಸುತ್ತಿರುವ ಖಾದರ್ ಚುನಾವಣಾ ಚದುರಂಗದಾಟ ದಲ್ಲಿ ದಾಳ ಉರುಳಿಸಿದ್ದಾರೆ.
ಅಶ್ರಫ್ ಅವರು ಉಳ್ಳಾಲದಲ್ಲಿ ( ಮಂಗಳೂರು ಕ್ಷೇತ್ರ) ದಲ್ಲಿ ಕಣಕ್ಕಿಳಿದರೆ ಖಾದರ್ ಅವರ ನಾಗಲೋಟಕ್ಕೆ ಬ್ರೇಕ್ ಬೀಳುವುದು ಖಂಡಿತ ಎಂದೇ ವಿಶ್ಲೇಷಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠರನ್ನು ಸಂಪರ್ಕಿಸಿ, ಅವರ ಮನ ಒಲಿಸಿ , ಆ ಮೂಲಕ ಅಶ್ರಫ್ ನ ಬೆನ್ನ ಹಿಂದೆ ಕೆಲಸ ಮಾಡಿದ ಮಾಸ್ಟರ್ ಮೈಂಡ್ ಜೆ.ಡಿ ಎಸ್ ನ ಪ್ರಧಾನ ಕಾರ್ಯದರ್ಶಿ ಬಿ ಎಂ ಫಾರೂಕ್ ಅವರ ಮೇಲೆ ಒತ್ತಡ ಹಾಕುವ ಮೂಲಕ ಕೊನೇ ಕ್ಷಣದಲ್ಲಿ ಅಶ್ರಫ್ ಅವರು ಕಣದಿಂದ ಹಿಂದೆ ಸರಿಯುವಂತೆ ಮಾಡಲು ಖಾದರ್ ಯಶಸ್ವಿಯಾಗಿದ್ದಾರೆ.
ಫಾರೂಕ್ ಮೇಲೆ ಒತ್ತಡ ಯಾಕೆ ?
ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಫಾರೂಕ್ ಅವರು ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಸಿಟ್ಟಿಂಗ್ ಎಂ ಎಲ್ ಎ ಮೊಯಿದಿನ್ ಬಾವ ಅವರ ಸಹೋದರ.
ಮೊಯಿದಿ ಬಾವ ಅವರು ಉತ್ತರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ಆ ಕ್ಷೇತ್ರದಲ್ಲಿ ಅವರ ಎದುರಾಳಿ ಬಿಜೆಪಿಯಾಗಿದ್ದರೂ, ಕಾಂಗ್ರೆಸ್ ಮತ ವಿಭಜನೆಯಾಗುವುದು ಆ ಭಾಗದ ಸಾಮಾಜಿಕ ಹೋರಾಟಗಾರ ,
ಸಿಪಿಐಎಂ ನ ಅಭ್ಯರ್ಥಿ ಯಾಗಿರುವ ಮುನೀರ್ ಕಾಟಿಪಳ್ಳ ಅವರು ಚುನಾವಣೆಗೆ ನಿಂತಾಗ.
ಮುನೀರ್ ಅವರು ಅಖಾಡಕ್ಕೆ ಇಳಿದರೆ ಸೋಲಾಗುವುದು ಕಾಂಗ್ರೆಸ್ಸಿಗೇ. ಕಾರಣ ಅಲ್ಪ ಸಂಖ್ಯಾತದ ಮತಗಳು ಇಲ್ಲಿ ಹಂಚಿಹೋಗುವುದು ಗ್ಯಾರಂಟಿ. ಆಗ ಸೋಲಾಗುವುದು ಕಾಂಗ್ರಸ್ಸಿಗೇ.
ಈ ಹಿನ್ನೆಲೆಯಲ್ಲಿ ಫಾರೂಕ್ ಅವರ ಸಹೋದರ ಮೊಯಿದಿನ್ ಬಾವ ಅವರು ಸೋಲದಂತಾಗಲೂ ಉಳ್ಳಾಲಲ್ಲಿ ಅಶ್ರಫ್ ನಿಲ್ಲಬಾರದು ಎಂಬ ಬ್ಲೇಕ್ ಮೇಲ್ ತಂತ್ರವನ್ನು ಇಲ್ಲಿ ಅನುಸರಿಸಲಾಗಿದೆ.
ಇದಕ್ಕಾಗಿ ಕೇರಳದ ಕಮ್ಯುನಿಸ್ಟ್ ವರಿಷ್ಟರನ್ನು ಸಂಪರ್ಕಿಸಿದ ಖಾದರ್ ಅವರು ಮುಣೀರ್ ಕಾಟಿಪಳ್ಳ ಅವರು ಕಣದಿಂದ ಹಿಂದಕ್ಕೆ ಸರಿಯುವಂತೆ ಮಾಡಲು ಯಶಸ್ವಿಯಾಗಿದ್ದಾರೆ.
ಮುನೀರ್ ಅವರು ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.
ಆದರೆ ಮೂಲಗಳ ಪ್ರಕಾರ ಇದೇ 27 ಕ್ಕೇ ನಾಮಪತ್ರವನ್ನು ವಾಪಸ್ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.
ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಉರುಳಿಸಿದ ಖಾದರ್ :
ಒಟ್ಟಾರೆ ಅವಲೋಕನ ಮಾಡಿದರೆ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಖಾದರ್ ಅವರು ಹೊಡೆದುರುಳಿಸಿದ್ದಾರೆ.
ಒಂದು ಉಳ್ಳಾಲದಲ್ಲಿ ಅಶ್ರಫ್ ಮತ್ತೊಂದು ಸುರತ್ಕಲಿನಲ್ಲಿ ಮುನೀರ್ ಕಾಟಿಪಳ್ಳ.
ಹೀಗೇ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಮೊಯ್ದಿನ್ ಬಾವಾ ಗೆಲುವಿನ ಅಡೆತಡೆ ನಿವಾರಿಸುವ ಮೂಲಕ ಮಂಗಳೂರು ಕ್ಷೇತ್ರ ದಲ್ಲಿ ತನ್ನ ಗೆಲುವು ಸುಲಭ ಗೊಳಿಸಿದ್ದಾರೆ ಯು.ಟಿ. ಖಾದರ್.
ಅಶ್ರಫ್ ಪಕ್ಷೇತರ ಅಭ್ಯರ್ಥಿ ?:
ಮಂಗಳೂರು ಕ್ಷೇತ್ರ ( ಉಳ್ಳಾಲದಲ್ಲಿ ) ದಲ್ಲಿ ಖಾದರ್ ಗೆಲುವಿಗೆ ತಡೆಯೊಡ್ಡಲಿದ್ದ ಅಶ್ರಫ್ ನ ಅವರ ಟಿಕೇಟನ್ನು ಜೆಡಿಎಸ್ ವರಿಷ್ಟರು ಕಸಿದ ಹಿನ್ನೆಲೆಯಲ್ಲಿ ಅಶ್ರಫ್ ಅವರು ಪಕ್ಷೇತರ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಚಿಂತನೆ ನಡೆಸಿದ್ದಾರೆ.
ಅದು ಕೂಡ ಖಾದರ್ ವಿರುದ್ದ ಪಕ್ಷೇತರ ಅಭ್ಯರ್ಥಿಯಾಗಿ ಕಣ ಕ್ಕಿಳಿಯಲು ಅಶ್ರಫ್ ತೀರ್ಮಾನಿಸಿದ್ದಾರೆ.
ಈ ಹಿನ್ನಲೆಯಲ್ಲಿ ಇಂದು ಸಂಜೆ ಅಶ್ರಫ್ ಬೆಂಬಲಿಗರ ಮಹತ್ವದ ಸಭೆ ನಡೆಯಲಿದ್ದು, ಚುನಾವಣೆಯಲ್ಲಿ ಸ್ಪರ್ಧೆಯ ಬಗ್ಗೆ ತೀರ್ಮಾನ ವನ್ನು ಈ ಸಭೆಯಲ್ಲಿ ಕೈಗೊಳ್ಳಲಾಗುವುದು ಎಂದು ತಿಳಿದು ಬಂದಿದೆ.