LATEST NEWS
ಸೋಮವಾರ ನಾಮಪತ್ರ ಸಲ್ಲಿಕೆ ಹಿನ್ನಲೆ ವಿವಿಧ ಧಾರ್ಮಿಕ ಕ್ಷೇತ್ರಗಳ ಭೇಟಿ ಮಾಡಿದ ವೇದವ್ಯಾಸ್ ಕಾಮತ್
ಸೋಮವಾರ ನಾಮಪತ್ರ ಸಲ್ಲಿಕೆ ಹಿನ್ನಲೆ ವಿವಿಧ ಧಾರ್ಮಿಕ ಕ್ಷೇತ್ರಗಳ ಭೇಟಿ ಮಾಡಿದ ವೇದವ್ಯಾಸ್ ಕಾಮತ್
ಮಂಗಳೂರು,ಎಪ್ರಿಲ್ 22 : ಯುವ ನೇತಾರ, ಭಾರತೀಯ ಜನತಾ ಪಾರ್ಟಿ ಯ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಡಿ . ವೇದವ್ಯಾಸ್ ಕಾಮತ್ ಸೋಮವಾರದಂದು ನಾಮ ಪತ್ರ ಸಲ್ಲಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಶ್ರೀ ಕ್ಷೇತ್ರ ಬ್ರಹ್ಮ ಬೈದರ್ಕಳ ಗರೋಡಿ ,ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನ, ಮಂಗಳೂರು ಬಿಷಪ್ ಹೌಸಿನಲ್ಲಿರುವ ಚಾಪೆಲ್ ಗಳಿಗೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದುಕೊಂಡರು .
ಬಳಿಕ ನಂದಿ ಗುಡ್ಡೆ ಯಲ್ಲಿರುವ ಶ್ರೀನಿವಾಸ ಮಲ್ಯ ರವರ ಪ್ರತಿಮೆಗೆ ಮಾಲಾರ್ಪಣೆ ಗೈದು ಗೌರವ ಸಲ್ಲಿಸಲಾಯಿತು .
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಬ್ರಹ್ಮ ಬೈದರ್ಕಳ ಗರೋಡಿ ಯ ಅಧ್ಯಕ್ಷರಾದ ಚಿತ್ತರಂಜನ್ ಗರೋಡಿ , ಸಂದೀಪ್ ಗರೋಡಿ , ಜಗದೀಶ್ ಗರೋಡಿ , ದೇವೋಜಿ ರಾವ್ , ಸಂದೀಪ್ ಶೆಟ್ಟಿ , ಅಜಯ್ , ರಮೇಶ್ ಕಂಡೇಟು , ಪ್ರಭಾಮಾಲಿನಿ , ಸೂರ್ಯನಾರಾಯಣ ದೇವಸ್ಥಾನ ದ ಬಾಲಕೃಷ್ಣ ಕೊಟ್ಟಾರಿ , ಗಣೇಶ್ ಶೆಟ್ಟಿ , ಕೆ . ಪಿ ಶೆಟ್ಟಿ , ವಸಂತ ಪೂಜಾರಿ , ವಿಜಯ್ ಕುಮಾರ್ , ವಿಠ್ಠಲ್ ಪೂಜಾರಿ ಉಪಸ್ಥಿತರಿದ್ದರು .
ಸೋಮವಾರ ಬೆಳಿಗ್ಗೆ ೧೧:೦೦ ಕ್ಕೆ ಸರಿಯಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ದಿಂದ ಪಾದಯಾತ್ರೆಯ ಮೂಲಕ ಮಂಗಳೂರು ಮಹಾನಗರ ಪಾಲಿಕೆ ಕಛೇರಿಗೆ ತೆರಳಿ ನಾಮಪತ್ರ ಸಲ್ಲಿಸಲಿರುವರು.
ಈ ಬೃಹತ್ ಪಾದಯಾತ್ರೆಯಲ್ಲಿ ಮಂಗಳೂರು ಮಹಾನಗರದ ಬಿಜೆಪಿಯ ಎಲ್ಲಾ ನಾಯಕರು, ಮನಪಾ ಸದಸ್ಯರು,
ವಿವಿಧ ಮೋರ್ಚಾಗಳ ಪಧಾಧಿಕಾರಿಗಳು, ಕಾರ್ಯಕರ್ತರು, ಸಂಘಟನೆಗಳ ಪ್ರಮುಖರು ಹಾಗೂ ಕಾರ್ಯಕರ್ತರು, ಭಾರತೀಯ ಜನತಾ ಪಕ್ಷದ ಹಿತೈಷಿಗಳು ಬಹು ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
You must be logged in to post a comment Login