FILM
ಬಾಲಿವುಡ್ ಗೆ ಬಾಬಾ ಎಂಟ್ರಿ
ಮುಂಬಯಿ ಅಗಸ್ಟ್ 10: ಯೋಗಗುರು ಬಾಬಾ ರಾಮ್ ದೇವ್ ಮೂರನೇ ಅವತಾರಕ್ಕೆ ಸಿದ್ಧರಾಗಿದ್ದಾರೆ. ಸ್ವದೇಶಿ ಉತ್ಪನ್ನಗಳ ತಯಾರಿಕಾ ಸಂಸ್ಥೆ ಪತಂಜಲಿಯನ್ನು ಸ್ಥಾಪಿಸುವ ಮೂಲಕ ದೇಶದಲ್ಲಿ ಸ್ವದೇಶಿ ಚಳುವಳಿಗೆ ಚಾಲನೆ ನೀಡಿದ ಬಾಬಾ ರಾಮ್ ದೇವ್ ಇದೀಗ ತನ್ನ ಎರಡನೇ ಅವತಾರವನ್ನು ಬಾಲಿವುಡ್ ಮೂಲಕ ತೋರಿಸಲಿದ್ದಾರೆ.
ಲೋಮ್ ಹರ್ಷ್ ನಿರ್ದೇಶನದ , ಗಾವಿ ಚಾಹಲ್ ಹಾಗೂ ದಿಯಾನಾ ಉಪ್ಪಳ್ ನಟನೆಯ ‘ ಏ ಹೈ ಇಂಡಿಯಾ’ ಚಿತ್ರವನ್ನು ಬೆಂಬಲಿಸಿರುವ ಬಾಬಾ ರಾಮ್ ದೇವ್ ಚಿತ್ರದ ‘ಸಯ್ಯಾ ಸಯ್ಯಾ ‘ ಎಂಬ ಹಾಡಿನಲ್ಲೂ ಕಾಣಿಸಿಕೊಂಡಿದ್ದಾರೆ.
ಡಿ ಎಲ್ ಬಿ ಬ್ಯಾನರ್ ನಲ್ಲಿ ಸಂದೀಪ್ ಚೌಧರಿ ನಿರ್ಮಿಸಿರುವ ‘ ಏ ಹೈ ಇಂಡಿಯಾ’ ಇದೇ ಅಗಸ್ಟ್ 18 ರಂದು ತೆರೆ ಕಾಣಲಿದೆ. ಸಿನಿಮಾ ಕುರಿತು ಮಾತನಾಡಿದ ಬಾಬಾ ರಾಮ್ ದೇವ್ ‘ ಭಾರತಕ್ಕೆ ಜಗತ್ತನ್ನೇ ಮುನ್ನಡೆಸುವ ಸಾಮರ್ಥ್ಯವಿದೆ ಎಂಬುದನ್ನು ‘ ಏ ಹೈ ಇಂಡಿಯಾ’ ಚಿತ್ರದಲ್ಲಿ ಅಚ್ಚುಕಟ್ಟಾಗಿ ನಿರೂಪಿಸಲಾಗಿದೆ.
ಹೀಗಾಗಿ ಸಾಕಷ್ಟು ಯೋಚನೆ ಮಾಡಿದ ನಂತರವೇ ನಾನು ಈ ಚಿತ್ರದಲ್ಲಿ ಬೆಂಬಲಿಸುವ ನಿರ್ಧಾರಕ್ಕೆ ಬಂದಿದ್ದೇನೆ. ಹಾಗೇ ಎಲ್ಲಾ ಭಾರತೀಯರೂ ಚಿತ್ರವನ್ನು ಪ್ರೋತ್ಸಾಹಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದಿದ್ದಾರೆ’.ನೂರು ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ, ವೇದಗಳ ತವರಾಗಿದೆ. ಆದಾಗ್ಯೂ ಜಗತ್ತಿನಾದ್ಯಂತ ಕೆಲ ಮಂದಿಗೆ ಭಾರತದ ಬಗ್ಗೆ ತಪ್ಪು ಕಲ್ಪಿನೆಗಳಿವೆ. ಆದರೆ ಭಾರತ ‘ಹಾವಾಡಿಗರ ನಾಡು’ ಎಂಬುದಕ್ಕೂ ಮಿಗಿಲಾಗಿರುವ ಅನನ್ಯ ರಾಷ್ವ್ರವಾಗಿದೆ ಎಂದು ಯೋಗಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ.