LATEST NEWS
ನಾಳೆ ಉಡುಪಿ ಮಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡುವರೇ ?
ನಾಳೆ ಉಡುಪಿ ಮಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡುವರೇ ?
ಉಡುಪಿ ನವೆಂಬರ್ 18: ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಉಡುಪಿಗೆ ಭೇಟಿ ನೀಡಲಿದ್ದಾರೆ. ನಾಳೆ ಮುಂಜಾನೆ ಉಡುಪಿಗೆ ಬರಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಕ್ಕಳ ಆಸ್ಪತ್ರೆ ಕಟ್ಟಡ ಉದ್ಘಾಟನೆ ಹಾಗೂ ಉಡುಪಿ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಸಾರ್ವಜನಿಕ ಸಮಾರಂಭದಲ್ಲಿ ಅವರು ಭಾಗವಹಿಸಲಿದ್ದಾರೆ.
ಇಂದು ಸಿಎಂ ಸಿದ್ದರಾಮಯ್ಯ ಅವರ ಉಡುಪಿಯ ಪ್ರೋಗ್ರಾಂ, ಆದರೆ ಇಂಟ್ರೆಸ್ಟಿಂಗ್ ವಿಚಾರ ಈ ಪ್ರೋಗ್ರಾಂಗಳಲ್ಲಿ. ಉಡುಪಿಗೆ ಭೇಟಿ ನೀಡುವ ಸಿದ್ದರಾಮಯ್ಯ ಉಡುಪಿ ಮಠಕ್ಕೆ ಭೇಟಿ ನೀಡ್ತಾರಾ ಅಥವಾ ಈ ಹಿಂದಿನ ಹಾಗೆ ಭೇಟಿ ನೀಡದೇ ಮಠವನ್ನು ನಿರ್ಲಕ್ಷಿಸಿ ಹಿಂದಿರುಗುತ್ತಾರೊ ನೋಡಬೇಕು.
ಈಗಾಗಲೇ ಸಮುದಾಯದ ಕಾಗಿನೆಲೆ ಮಠಾಧೀಶರು ಉಡುಪಿ ಮಠಕ್ಕೆ ಭೇಟಿ ನೀಡಿ ತೆರಳಿದ್ದಾರೆ, ಕಾಗಿನೆಲೆ ಮಠಾಧೀಶರ ಹಾಗೂ ಪೇಜಾವರ ಶ್ರೀಗಳ ನಡುವೆ ಇದ್ದ ಭಿನ್ನಾಭಿಪ್ರಾಯಗಳು ಒಂದು ಹಂತದಲ್ಲಿ ನಿವಾರಣೆಯಾಗಿವೆ. ಈ ಹಿನ್ನಲೆಯಲ್ಲಿ ಮಠಕ್ಕೆಭೇಟಿ ನೀಡುವ ಅನಿವಾರ್ಯತೆಯಲ್ಲಿ ಸಿಎಂ ಸಿದ್ದರಾಮಯ್ಯ ಇದ್ದಾರೆ.
ನಾಳೆ ಉಡುಪಿ ಮಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದರೂ ,ಮಾಂಸಹಾರ ತಿಂದು ಭೇಟಿ ನೀಡುತ್ತಾರೆ ಅಥವಾ ವೃತದಲ್ಲಿದ್ದು ಭೇಟಿ ನೀಡುತ್ತಾರೋ ಎಂಬ ಕುತೂಹಲ ಇನ್ನೊಂದೆಡೆ.
ಏಕೆಂದರೆ ಸಿಎಂ ಸಿದ್ದರಾಮಯ್ಯ ಈಗಾಗಲೇ ಮೀನು ಸೇವಿಸಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಭಾರಿ ಟೀಕೆಗೆ ಗುರಿಯಾಗಿದ್ದರು. ಇನ್ನೊಂದು ವಿಚಾರ ಎಂದರೆ ಸಿಎಂ ಅವರಿಗೆ ಬೆಳ್ಳಂಬೆಳಿಗ್ಗೆ ಪಾಯ ಸೇವಿಸುವ ಅಭ್ಯಾಸವಿದೆ. ಈ ಹಿನ್ನಲೆಯಲ್ಲಿ ಪಾಯ ಸೇವಿಸಿ ಸಿಎಂ ಸಿದ್ದರಾಮಯ್ಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡುತ್ತಾರೋ ಎಂಬ ಕುತೂಹಲ ಶ್ರೀಕೃಷ್ಣ ಭಕ್ತರಲ್ಲಿ ಮನೆ ಮಾಡಿದೆ.
ಈ ನಡುವೆ ಉಡುಪಿಯಲ್ಲಿ ನಾಳೆ ಉದ್ಘಾಟನೆಗೆ ಸಿದ್ದವಾಗಿರುವ ಆಸ್ಪತ್ರೆಯ ವಿರುದ್ದ ಆಕ್ರೋಶ ಭುಗಿಲೆದ್ದಿದೆ. ಆಸ್ಪತ್ರೆಗೆ ಉದ್ಘಾಟನೆ ಸಂದರ್ಭದಲ್ಲಿ ಸಿಎಂಗೆ ಪ್ರತಿಭಟನೆಯ ಬಿಸಿ ತಟ್ಟುವ ಎಲ್ಲಾ ಸಾಧ್ಯತೆ ಇದೆ.
ಈ ಎಲ್ಲಾ ಸಂಕಷ್ಟಗಳನ್ನು ಸಿಎಂ ಸಿದ್ದರಾಮಯ್ಯ ನಾಳೆ ಹೇಗೆ ನಿಭಾಯಿಸುತ್ತಾರೆ ಕಾದು ನೋಡಬೇಕಿದೆ.