DAKSHINA KANNADA
ನನ್ನ ಗೆಲುವಿಗೆ ಮುಸ್ಲಿಮರೇ ಕಾರಣ, ಅವರ ಋಣ ಈ ಜನ್ಮದಲ್ಲಿ ತೀರಿಸಲು ಅಸಾಧ್ಯ : ಸಚಿವ ರೈ
ನನ್ನ ಗೆಲುವಿಗೆ ಮುಸ್ಲೀಮರೇ ಕಾರಣ, ಅವರ ಋಣ ಈ ಜನ್ಮದಲ್ಲಿ ತೀರಿಸಲು ಅಸಾಧ್ಯ : ಸಚಿವ ರೈ
ಮಂಗಳೂರು, ಡಿಸೆಂಬರ್ 29 : ಸಚಿವ ರಮಾನಾಥ ರೈ ಅವರು ಇದೀಗ ಅಲ್ಪ ಸಂಖ್ಯಾತರ ಓಲೈಕೆಗೆ ಮುಂದಾಗಿದ್ದಾರೆ. ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ಬ್ಯಾರಿ ಅಕಾಡೆಮಿಯ ಸಮಾರಂಭದ ವೇದಿಕೆಯಲ್ಲಿ ಮುಸ್ಲೀಂ ಸಮುದಾಯವನ್ನು ಹಾಡಿ ಹೊಗಳಿದ್ದಾರೆ ರೈಗಳು.
ಬಂಟ್ವಾಳ ಕ್ಷೇತ್ರದಲ್ಲಿ ತಾನು 6 ಬಾರಿ ಗೆದ್ದು ಬರಲು ಮುಸ್ಲಿಂ ಸಮುದಾಯವೇ ಕಾರಣ.
ಮುಸ್ಲಿಂ ಸಮುದಾಯದ ಜನರ ಈ ಋಣ ಜನ್ಮ ಜನ್ಮಾಂತರಗಳಿಗೂ ತೀರಿಸಲು ಸಾಧ್ಯವಿಲ್ಲ ಎಂಬ ಹೇಳಿಕೆ ನೀಡಿದ್ದಾರೆ.
ರಮಾನಾಥ ರೈ ಅವರ ಈ ಹೇಳಿಕೆ ಹಿಂದೂ ಸಮುದಾಯದ ಜನರ ಕೆಂಗಣ್ಣಿಗೆ ಕಾರಣವಾಗಿದೆ.
ಮಂಗಳೂರಿನ ಪುರಭವನದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಬ್ಯಾರಿ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ. ರೈ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ರೈ ಅವರ ಜಾತ್ಯಾತೀತ ಸಿದ್ದಾಂತ ಬಗ್ಗೆ ಚರ್ಚೆ ಆರಂಭವಾಗಿದೆ.
ಮಂಗಳೂರು ವಿಧಾನ ಸಭಾ ಕ್ಷೇತ್ರ ಸಂಖ್ಯಾ ಕ್ಷೇತ್ರದಿಂದ ದೊಡ್ಡದಿದ್ದರೆ, ವಿಟ್ಲದ ಭಾಗವಾಗಿ ಸೇರಿಕೊಂಡಿರುವ ಬಂಟ್ವಾಳ ವಿಧಾನಸಭಾ ಕ್ಷೇತ್ರ ಅತ್ಯಂತ ಹೆಚ್ಚು ಮುಸ್ಲಿಮರ ಜನ ಸಂಖ್ಯೆ ಇರುವ ಕ್ಷೇತ್ರ.
ಈ ಕ್ಷೇತ್ರದಲ್ಲಿ ಬಂಟರು ಅಲ್ಪ ಸಂಖ್ಯಾತರು. ಆದರೆ ಬ್ಯಾರಿ ಭಾಷೆ ಮಾತನಾಡುವ ಜನರ ಜಾತ್ಯಾತೀತ ನಿಲುವನ್ನು ಎಲ್ಲರೂ ಮೆಚ್ಚಬೇಕಾಗಿದೆ ಎಂದ ಅವರು ಜಾತಿ, ಧರ್ಮದ ಪರಿಧಿಯನ್ನು ಮೀರಿ ತನ್ನನ್ನು ವಿಧಾನಸಭೆಗೆ ಆಯ್ಕೆ ಮಾಡುವ ಕೆಲಸ ಮಾಡಿದ್ದಾರೆ.
ನಿಮ್ಮ ಋಣ ಈ ಜನ್ಮದಲ್ಲಿ ತೀರಿಸಲು ಅಸಾಧ್ಯ. ಮತ್ತು ಇದನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ತನ್ನ ಗೆಲುವಿನ ಯಶಸ್ಸಿಗೆ ಕೇವಲ ಮುಸ್ಲಿಂ ಸಮುದಾಯ ಕಾರಣ ಎಂದು ಹೇಳುವುದು ಎಷ್ಟು ಸರಿ ಎನ್ನುವ ಕುರಿತು ಈಗಾಗಲೇ ಚರ್ಚೆ ಆರಂಭಗೊಂಡಿದೆ.
ಚುನಾವಣೆ ಹತ್ತಿರ ಬರುವುದರಿಂದ ಮುಂದಿನ ದಿನಗಳಲ್ಲಿ ಸಚಿವ ರೈ ಅವರ ಈ ವಿವಾದತ್ಮಕ ಹೇಳಿಕೆ ರಾಜಕೀಯವಾಗಿ ಬಳಕೆಯಾಗುವ ಸಾದ್ಯತೆಗಳು ಹೆಚ್ಚಾಗಿದೆ.
ಸಚಿವ ರಮಾನಾಥ ರೈ ಅವರ ಈ ಹೇಳಿಕೆಯನ್ನು ಬಿಜೆಪಿ ಪ್ರಮುಖ ಅಸ್ತ್ರವಾಗಿ ಬಳಕೆ ಮಾಡುವ ಸಾಧ್ಯತೆಗಳಿವೆ.
ವಿಡಿಯೋಗಾಗಿ..