Connect with us

LATEST NEWS

ಮಿಶ್ರಾ ಸಹೋದರರಿಗೆ ಅಳ್ವಾಸ್ ವಿರಾಸತ್ ಪ್ರಶಸ್ತಿ

ಮಿಶ್ರಾ ಸಹೋದರರಿಗೆ ಅಳ್ವಾಸ್ ವಿರಾಸತ್ ಪ್ರಶಸ್ತಿ

ಮಂಗಳೂರು, ಡಿಸೆಂಬರ್ 28 : ಈ ಬಾರಿಯ ಆಳ್ವಾಸ್ ವಿರಾಸತ್ ಪ್ರಶಸ್ತಿಗೆ ಭಾರತೀಯ ಸಂಗೀತ ಕ್ಷೇತ್ರದ ದ್ವಂದ್ವ ಹಾಡುಗಾರಿಕೆಯ ದಿಗ್ಗಜರಾದ ರಾಜನ್ -ಸಾಜನ್ ಮಿಶ್ರಾ ಸಹೋದರರು ಆಯ್ಕೆಯಾಗಿದ್ದಾರೆ.

ಮೂಡಬಿದ್ರೆಯಲ್ಲಿ ಜನವರಿ 12 ರಂದು ನಡೆಯುವ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ 24 ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ.

ಪ್ರಶಸ್ತಿ 1 ಲಕ್ಷ ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರಗಳನ್ನೊಳಗೊಂಡಿದೆ.

ಬನಾರಸ್ ಸಂಗೀತ ಕುಟುಂಬದ ಕುಡಿಗಳಾದ  ರಾಜನ್ – ಸಾಜನ್ ಮಿಶ್ರಾ ಸಹೋದರರು ದೇಶದಲ್ಲಿ ಅತ್ಯುತ್ತಮ ಹಾಡುಗಾರರಾಗಿದ್ದಾರೆ.

ಬನಾರಸ್ ಘರನಾ ಸಂಗೀತ ವಿದ್ವಾಂಸರಾದ ತಂದೆ ಪಂಡಿತ್ ಹನುಮಾನ್ ಪ್ರಸಾದ್ ಹಾಗೂ ಮಾವ ಪಂಡಿತ್ ಗೊಪಾಲ್ ಮಿಶ್ರಾ ಅವರ ಗರಡಿಯಲ್ಲಿ ಪಳಗಿದವರು.

ಈ ಸಹೋದರರು ಶಾಸ್ತ್ರೀಯ ದ್ವಂದ್ವ ಹಾಡುಗಾರರಾಗಿ ಬೆರಗು ಮೂಡಿಸುತ್ತಿದ್ದಾರೆ.

ಪದ್ಮಭೂಷಣ, ಸಂಗೀತ ನಾಟಕ ಅಕಾಡಮಿ, ತಾನ್ ಸೇನ್, ಓಂಕಾರ ನಾಥ್ ಥಾಕೂರು, ಕಾಶಿಗೌರವ ಹೀಗೆ ಅನೇಕ ಪ್ರಶಸ್ತಿಗಳ ಗೌರವ ಸಂದಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *