LATEST NEWS
ಟಿಪ್ಪು ಜಯಂತಿ ಅಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಲು ಯಾರ ಅಪ್ಪಣೆ ಅಗತ್ಯ ಇಲ್ಲ : ಸಚಿವ ಖಾದರ್
ಟಿಪ್ಪು ಜಯಂತಿ ಅಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಲು ಯಾರ ಅಪ್ಪಣೆ ಅಗತ್ಯ ಇಲ್ಲ : ಸಚಿವ ಖಾದರ್
ಬಂಟ್ವಾಳ, ಅಕ್ಟೋಬರ್ 22 : ಟಿಪ್ಪು ಜಯಂತಿ ಆಚರಣೆ ವಿಚಾರವಾಗಿ ಆಡಳಿತ ರೂಢ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ವಾಕ್ಸಮರ ದಿನದಿಂದ ದಿನಕ್ಕೆ ತೀವೃವಾಗುತ್ತಿದೆ.
ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರುಗಳು ಟಿಪ್ಪು ಜಯಂತಿ ಆಚರಣೆಯ ಅಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕುವ ಬಗ್ಗೆ ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.
ಇದೀಗ ಆಹಾರ ಸಚಿವ ಯು.ಟಿ. ಖಾದರ್ ಅವರ ಸರದಿ. ಬಂಟ್ವಾಳ ದಲ್ಲಿ ಈ ಬಗ್ಗೆ ಪ್ರತಿಕ್ರೀಯಿಸಿರುವ ಆಹಾರ ಸಚಿವ ಯುಟಿ ಖಾದರ್ ಟಿಪ್ಪು ಜಯಂತಿಯ ಆಹ್ವಾನ ಪತ್ರಿಕೆಯಲ್ಲಿ ಬಿಜೆಪಿ ಜನಪ್ರತಿನಿಧಿಗಳ ಹೆಸರನ್ನು ಬಿಜಿಪಿ ನಾಯಕರುಗಳನ್ನು ಕೇಳಿ ಹಾಕಿಸುತ್ತಿಲ್ಲ.
ಕೆಲವರು ಅಹ್ವಾನ ಪತ್ರಿಕೆ ಯಲ್ಲಿ ಹೆಸರು ಹಾಕಬಾರದಾಗಿ ಹೇಳುತ್ತಾರೆ ಆದರೆ ಡಾ. ಬಿ ಆರ್ ಅಂಬೇಡ್ಕರ್ ಅವರು ಬರೆದ ಸಂವಿಧಾನ ಪ್ರಕಾರ ಹಾಕುತ್ತೇವೆ.
ಹೊರತು ಇವರ ಮುಖ ನೋಡಿ ಹೆಸರು ಹಾಕೋದಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.