LATEST NEWS
ಜಿಎಸ್ ಟಿ ದರ ಕಡಿತಗೊಳಿಸದ ಮಳಿಗೆಗಳ ಮೇಲೆ ಅಧಿಕಾರಿಗಳಿಂದ ದಾಳಿ – ದೂರು ದಾಖಲು
ಜಿಎಸ್ ಟಿ ದರ ಕಡಿತಗೊಳಿಸದ ಮಳಿಗೆಗಳ ಮೇಲೆ ಅಧಿಕಾರಿಗಳಿಂದ ದಾಳಿ – ದೂರು ದಾಖಲು
ಮಂಗಳೂರು ನವೆಂಬರ್ 25: ಕೇಂದ್ರ ಸರಕಾರ ಇತ್ತೀಚೆಗ ಅಗತ್ಯ ವಸ್ತುಗಳ ಮೇಲಿನ ಜಿಎಸ್ ಟಿ ದರವನ್ನು ಕಡಿತಗೊಳಿಸಿ ಆದೇಶ ಹೊರಡಿಸಿತ್ತು. ಸುಮಾರು 177 ವಸ್ತುಗಳಿಗೆ ಜಿಎಸ್ ಟಿ ದರ 28 ಶೇಕಡ ದಿಂದ 18 ಶೇಕಡ ಕ್ಕೆ ಇಳಿಕೆಯಾಗಿತ್ತು ಆದರೂ ಕೆಲ ಮಳಿಗೆಗಳಲ್ಲಿ ಜಿಎಸ್ ಟಿ ಅಧಿಕವಾಗಿ ಹೇರಲಾಗುತ್ತಿತ್ತು ಎಂಬ ದೂರು ಕೇಳಿ ಬಂದ ಹಿನ್ನಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ. ಜಿಎಸ್ ಟಿ ದರ ಇಳಿಸದ ಮಳಿಗೆಗಳ ಮೇಲೆ ತೂಕ & ಮಾಪನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕೇಂದ್ರ ಸರಕಾರದ ಆದೇಶವನ್ನು ಮೀರಿ ವಸ್ತುಗಳ ಮೇಲಿನ ಎಂಆರ್ ಪಿ ದರ ಇಳಿಸದ ಹಿನ್ನಲೆಯಲ್ಲಿ ಈ ದಾಳಿ ನಡೆದಿದ್ದು. ದಕ್ಷಿಣ ಕನ್ನಡ ಜಿಲ್ಲೆಯ ೧೫ ಮಳಿಗೆಗಳಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಒಟ್ಟು ನಾಲ್ಕು ಮಳಿಗೆಗಳ ವಿರುದ್ಧ ಕೇಸು ದಾಖಲಿಸಲಾಗಿದೆ.
ಮಂಗಳೂರಿನ ಅತ್ತಾವರದ ಬಿಗ್ ಬಜಾರ್ ವಿರುದ್ಧ ಕೂಡ ದೂರು ದಾಖಲಾಗಿದೆ. ಬಿಗ್ ಬಜಾರ್ ನಲ್ಲಿ ತಪಾಸಣೆ ವೇಳೆ ದರ ಇಳಿಕೆ ಬದಲು ಡಿಸ್ಕೌಂಟ್ ರೇಟ್ ಪತ್ತೆಯಾಗಿತ್ತು. ಈ ಹಿನ್ನಲೆಯಲ್ಲಿ ತೂಕ & ಮಾಪನ ಇಲಾಖೆ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.