Connect with us

    UDUPI

    ಜಾನಪದ ಕಲೆಗಳನ್ನು ಯುವ ಜನತೆ ಉಳಿಸಬೇಕು- ದಿನಕರ ಬಾಬು

    ಜಾನಪದ ಕಲೆಗಳನ್ನು ಯುವ ಜನತೆ ಉಳಿಸಬೇಕು- ದಿನಕರ ಬಾಬು

    ಉಡುಪಿ, ಡಿಸೆಂಬರ್ 10: ಗ್ರಾಮೀಣ ಜಾನಪದ ಕಲೆಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಯುವಜನ ಮೇಳಗಳು ಸಹಕಾರಿಯಗಲಿದ್ದು, ಯುವ ಜನರು ಜಾನಪದ ಕಲೆಗಳನ್ನು ಉಳಿಸಿ, ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು ಮತ್ತು ಯುವ ಜನ ಮೇಳಗಳನ್ನು ಗ್ರಾಮೀಣ ಭಾಗದಲ್ಲಿ ಏರ್ಪಡಿಸುವುದರಿಂದ , ಗ್ರಾಮೀಣ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಾಧ್ಯ ಎಂದು ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.

    ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಉಡುಪಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ, ನವಚೇತನ ಯುವಕ/ಯುವತಿ ಮಂಡಲ , ಕಟ್ಟೆಗುಡ್ಡೆ ಕುತ್ಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ , ಜಿಲ್ಲಾ ಮಟ್ಟದ ಯುವಜನಮೇಳ -2017-18 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಮುಖ್ಯ ಅತಿಥಿಯಾಗಿದ್ದ , ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷೆ ನಳನಿ ಪ್ರದೀಪ್ ರಾವ್ ಮಾತನಾಡಿ, ಯುವ ಜನತೆ ತಮ್ಮಲ್ಲಿನ ಪ್ರತಿಭೆ ಪ್ರದರ್ಶಿಸಲು ಯುವಜನ ಮೇಳಗಳು ಸಹಕಾರಿ ಎಂದು ಹೇಳಿದರು.

    ಇದೇ ಸಂದರ್ಭದಲ್ಲಿ , ಉಡುಪಿ ಜಿಲ್ಲಾ ಮಟ್ಟದ ಯುವ ಪ್ರಶಸ್ತಿಯನ್ನು , ನವಚೇತನ ಯುವಕ ಮಂಡಲದ ಅಧ್ಯಕ್ಷ ಗಿರೀಶ್ ಕುಮಾರ್ ಅವರಿಗೆ ಹಾಗೂ ಜಿಲ್ಲಾ ಯುವ ಸಾಂಘಿಕ ಪ್ರಶಸ್ತಿಯನ್ನು ಕುತ್ಯಾರು ಯುವಕ ಮಂಡಲಕ್ಕೆ ಪ್ರಧಾನ ಮಾಡಲಾಯಿತು.

    Share Information
    Advertisement
    Click to comment

    Leave a Reply

    Your email address will not be published. Required fields are marked *