Connect with us

    UDUPI

    ರಷ್ಯನ್ ಸಿನಿ ತಾರೆ ಆನ್ನಾ ಆರ್ಗವ್ ಉಡುಪಿಯಲ್ಲಿ: ಪಂಚಕರ್ಮ ಚಿಕಿತ್ಸೆ ಪಡೆದ ಹಾಸ್ಯ ನಟಿ

    ರಷ್ಯನ್ ಸಿನಿ ತಾರೆ ಆನ್ನಾ ಆರ್ಗವ್ ಉಡುಪಿಯಲ್ಲಿ: ಪಂಚಕರ್ಮ ಚಿಕಿತ್ಸೆ ಪಡೆದ ಹಾಸ್ಯ ನಟಿ

    ಉಡುಪಿ, ಡಿಸೆಂಬರ್ 11 : ಖ್ಯಾತ ರಷ್ಯನ್ ಸಿನೆಮಾ ತಾರೆ, ಹಾಸ್ಯ ನಟಿ ಆನ್ನಾ ಆರ್ಗವ್ ಕರಾವಳಿ ನಗರಿ ಉಡುಪಿಗೆ ಆಗಮಿಸಿದ್ದದರು.

    ಉಡುಪಿಯ ಕಾಪುವಿನಲ್ಲಿರುವ ಡಾ. ತನ್ಮಯ್ ಗೋ ಸ್ವಾಮೀ ಅವರ ಬಳಿ ಪಂಚಕರ್ಮ ಚಿಕಿತ್ಸೆ ಪಡೆಯಲು ಅವರು ಬಂದಿದ್ದರು.

    12 ದಿನಗಳ ಭಾರತ ಪ್ರವಾಸಲ್ಲಿದ್ದ ಅವರು ಆದಿತ್ಯವಾರ ಭಾರತದಿಂದ ನಿರ್ಗಮಿಸಿದ್ದಾರೆ.

    ಈ ಸಂದರ್ಭದಲ್ಲಿ ತನ್ನನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮನ ಬಿಚ್ಚಿ ಮಾತನಾಡಿದಳು.

    ಹಾಸ್ಯ ನಟಿ ಆನ್ನಾ ಆರ್ಗವ್ ಭಾರತೀಯ ಸಂಸ್ಕೃತಿ, ಯೋಗಗಳಿಂದ ಆಕರ್ಷಿತಳಾಗಿ ಆಯುರ್ವೇದ ಪಂಚಕರ್ಮ ಚಿಕಿತ್ಸೆ ಪಡೆದು ಕೊಳ್ಳಲು ಮತ್ತು ಶಾಂತಿಯನ್ನು ಅರಸಿ ಭಾರತಕ್ಕೆ ಬಂದಿರುವುದಾಗಿ ರಷ್ಯನ್‌ ಸಿನೆಮಾ ರಂಗದ ಹಾಸ್ಯ ನಟಿ ಅನ್ನಾ ಆರ್ಗವ ಹೇಳಿದರು.

    ಕುಟುಂಬಸ್ತರೊಂದಿಗೆ ಹಾಸ್ಯ ನಟಿ

    ಬೆಳಗ್ಗೆ ಯೋಗ, ಪಂಚಕರ್ಮ ಚಿಕಿತ್ಸೆ, ಉಪಾಹಾರದ ಬಳಿಕ ಸಮುದ್ರದಲ್ಲಿ ವಿಹಾರ, ಸಂಜೆ ವಿಶೇಷ ಉಪನ್ಯಾಸಗಳ ಶ್ರವಣ ಇದು ನನ್ನ ದಿನಚರಿ.

    “ಯೋಗಾಸನಗಳಲ್ಲಿ ಶವಾಸನ ನನಗೆ ಬಹಳ ಇಷ್ಟ’ ಎಂದು ಹಾಸ್ಯ ಚಟಾಕಿ ಹಾರಿಸಿದ ಅವರು, ಭಾರತೀಯರು ಪ್ರಾಕೃತಿಕವಾಗಿಯೇ ಸಹಜ ನಗು ನಗುತ್ತಾರೆ. ಭಾರತ ದೇಶದ ಬಗ್ಗೆ ನನಲ್ಲಿ ಬೇರೆಯೇ ಅಭಿಪ್ರಾಯವಿತ್ತು.

    ಅದರೆ ಇಲ್ಲಿಗೆ ಬಂದ ಬಳಿಕ ಭಾರತದ ಬಗೆಗೆ ನನ್ನ ಅಭಿಪ್ರಾಯ ಸಂಪೂರ್ಣ ಬದಲಾಗಿದೆ.

    ರಷ್ಯನ್‌ ಸಿನೆಮಾ ರಂಗದಲ್ಲಿ ಹಲವು ವರ್ಷಗಳಿಂದಲೂ ಬಲು ಬೇಡಿಕೆಯ ಹಾಸ್ಯ ನಟಿಯಾಗಿದ್ದು, ವೀಕ್ಷಕರನ್ನು ನಗಿಸುತ್ತಿದ್ದೇನೆ.

    ಆದರೆ ಸ್ವತಃ ನನಗೆ ಮನಶಾಂತಿ ಇರಲಿಲ್ಲ.

    ಹಾಗಾಗಿ ಇಲ್ಲಿಗೆ ಬಂದು ಪಂಚಕರ್ಮ ಚಿಕಿತ್ಸೆ ಪಡೆದ ಬಳಿಕ ಹೆಚ್ಚು ಉಲ್ಲಸಿತಳಾಗಿದ್ದೇನೆ ಎಂದರು.

    ನನ್ನ ಪುತ್ರಿಯರಿಬ್ಬರು ಅಭಿನೇತ್ರಿಗಳಾಗಿದ್ದು, ಅವರನ್ನೂ ಇಲ್ಲಿ ಕರೆತರುವ ಇಚ್ಛೆ ಇದೆ ಎಂದು ಹೇಳಿದರು.

    ನನಗೆ ಭಾರತೀಯ ಸಿನೆಮಾ ಎಂದರೆ ಬಲು ಅಚ್ಚುಮೆಚ್ಚು. ಇಲ್ಲಿನ ಬಾಲಿವುಡ್‌ ಸಿನೆಮಾಗಳಲ್ಲಿ ನಟಿಸುವ ಆಸೆ ಇದೆ.

    ಚಿಕ್ಕಂದಿನಿಂದಲೇ ಹಿಂದಿ ಚಿತ್ರಗಳತ್ತ ಆಕರ್ಷಿತಳಾಗಿದ್ದು, “ಸೀತಾ ಔರ್‌ ಗೀತಾ’ ಸಿನೆಮಾವನ್ನು ಏಳು ಬಾರಿ ವೀಕ್ಷಿಸಿದ್ದೇನೆ.

    ಮಿಥುನ್ ಚಕ್ರವರ್ತಿಯವರ “ಡಿಸ್ಕೋ ಡ್ಯಾನ್ಸರ್‌’ ನಂತಹ ಚಿತ್ರ ಗಳನ್ನು ಬಹುವಾಗಿ ಮೆಚ್ಚಿಕೊಂಡಿದ್ದೇನೆ.

    ಇತ್ತೀಚಿನ ಸಿನೆಮಾಗಳಲ್ಲಿ “ಸ್ಲಂ ಡಾಗ್‌ ಮಿಲಿಯನೇರ್‌’ ಬಹಳ ಇಷ್ಟವಾದ ಸಿನೆಮಾ ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply