LATEST NEWS
ಕಾಂಗ್ರೆಸ್ ದುರಾಡಳಿತ ಕೊನೆಗಾಣಿಸಲು ಬಿಜೆಪಿಗೆ ಮತ ನೀಡಿ : ವೇದವ್ಯಾಸ್ ಕಾಮತ್
ಕಾಂಗ್ರೆಸ್ ದುರಾಡಳಿತ ಕೊನೆಗಾಣಿಸಲು ಬಿಜೆಪಿಗೆ ಮತ ನೀಡಿ : ವೇದವ್ಯಾಸ್ ಕಾಮತ್
ಮಂಗಳೂರು, ಎಪ್ರಿಲ್ 28 : ರಾಜ್ಯ ವಿಧಾನಸಭಾ ಚುನಾವಣೆಗೆ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿರುವ ಡಿ.ವೇದವ್ಯಾಸ್ ಕಾಮತ್ ಅವರು ಕೊಡಿಯಾಲ್ ಬೈಲಿನ ವಾರ್ಡ್ ನಂ 30ರ ಬೂತ್ ನಂ. 20 ರ ಕದ್ರಿಗುಡ್ಡೆ ಪರಿಸರದಲ್ಲಿ ಮನೆ ಮನೆಗಳಿಗೆ ತೆರಳಿ ಮತ ಯಾಚಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಬೇಸತ್ತಿರುವ ನಾಡಿನ ಜನರು ಈ ಬಾರಿ ಭಾರತೀಯ ಜನತಾ ಪಾರ್ಟಿಯನ್ನು ಗೆಲ್ಲಿಸಬೇಕೆಂದು ವಿನಂತಿಸಿದರು.
ನಂತರ ಪದವು ಪೂರ್ವ ವಾರ್ಡ್ ನಂ 36 ರಲ್ಲಿ ಮನೆ ಮನೆಗೆ ಭೇಟಿ ನೀಡಿ ಭಾರತೀಯ ಜನತಾ ಪಾರ್ಟಿ ಪರ ಮತ ಯಾಚಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಅಜಯ್, ಏಕನಾಥ್, ಸುರೇಶ್, ದೇವದಾಸ್, ಪ್ರದೀಪ್, ಸತೀಶ್, ಅನಿಲ್, ಹರಿಣಿ, ಸುಶಾಂತ್, ರಾಜಣ್ಣ, ಯೋಗೀಶ್, ಪ್ರಸಾದ್ ಮನೋಹರ್, ರಮೇಶ್ ಕಂಡೆಟ್ಟು, ಸಂಧ್ಯಾ ವೆಂಕಟೇಶ್, ವಿಶಾಲಕ್ಷಿ, ಸದಾಶಿವ, ಸುಮಿತ್, ಜಗದೀಶ್, ಜೀವನ್ ಕದ್ರಿ, ವಿವೇಕ್, ಸಂದೀಪ್, ಪ್ರಶಾಂತ್, ಮುಂತಾದವರು ಸಾಥ್ ನೀಡಿದರು