Connect with us

    LATEST NEWS

    ಪ್ರಕಾಶ ರೈ ಒಬ್ಬ ಬಾಯಿ ಬಡುಕ : ಬಿಜೆಪಿ ಮಹಿಳಾ ಮೋರ್ಚಾ

    ಪ್ರಕಾಶ ರೈ ಒಬ್ಬ ಬಾಯಿ ಬಡುಕ : ಬಿಜೆಪಿ ಮಹಿಳಾ ಮೋರ್ಚಾ

    ಮಂಗಳೂರು, ಎಪ್ರಿಲ್ 27 : ಮಂಗಳೂರು ದಕ್ಷಿಣ ವಿಧಾನಸಭಾ  ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತರ ಅವರ ಧರ್ಮಪತ್ನಿ ವಿರುದ್ದ ಕಮೆಂಟ್ ಮಾಡಿದ್ದ ನಟ ಪ್ರಕಾಶ್ ರೈ ಗೆ ಬಿಜೆಪಿ ಮಹಿಳಾ ಮೋರ್ಚಾ ತಿರುಗೇಟು ನೀಡಿದೆ.
      ನಾವು ಬಿಜೆಪಿ ಮಹಿಳೆ ಮೋರ್ಚಾದ ಸದಸ್ಯರು ಪ್ರಕಾಶ್ ರೈ ಅವರಲ್ಲಿ ಮನವಿ ಮಾಡುವುದು ಇಷ್ಟೇ : ನೀವು ಒಬ್ಬ ನಟ. ಸದ್ಯ ನೀವು  ಮತ, ಧರ್ಮ , ಜಾತಿ ಎಲ್ಲವನ್ನು ಮೀರಿ ಸಂತ ಪದವಿಗೇರಿದ್ದಿರಿ.
    ನಿಮ್ಮ ಜ್ಞಾನೋದಯ ನಮಗೆ ಸಂತಸ ತಂದಿದೆ. ಆದರೆ ಈ  ಧರ್ಮ , ಜಾತಿ ವಿಚಾರಗಳನ್ನು ನಮ್ಮಂತಹ ಸಾಮಾನ್ಯ ಜನರಿಗೆ ಬಿಟ್ಟು ಬಿಡಿ. ನಾವು ಯಾವ ರೀತಿಯ ರಾಜಕೀಯ ಬೇಕಾದರೂ ಮಾಡುತ್ತೇವೆ. ಧರ್ಮದ , ಜಾತಿಯ ವಿಚಾರದಲ್ಲಿ ನಿಮ್ಮಿಂದ ನಾವು ಏನ್ನನ್ನು ತಿಳಿಯಬೇಕಾದುದು ಇಲ್ಲ ಎಂದು ಮಂಗಳೂರು ದಕ್ಷಿಣ ಮಹಿಳಾ ಮೋರ್ಚಾ ಅಧ್ಯಕ್ಷೆ ಡಾ . ಮಂಜುಳಾ ರಾವ್ ಬಿ .ಜೆ ತಿರುಗೇಟು ನೀಡಿದ್ದಾರೆ.
    ಕಾಶ್ಮೀರಿದಲ್ಲಿ ಅಥವಾ ಬೇರಲ್ಲೊ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆದಾಗ ಬೊಬ್ಬೆ ಹೊಡೆಯುವ  , ಗೌರಿ ಲಂಕೇಶ್ ಕೊಲೆಯಾದಾಗ ಕಣ್ಣೀರು ಹಾಕುವ ನೀವು ನಮ್ಮ ಕರಾವಳಿ ಜಿಲ್ಲೆಯಲ್ಲಿ ಹಾಡಹಗಲೇ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಆದಾಗ ಯಾಕೆ ಒಂದು ಶಬ್ದ ಮಾತನಾಡುವುದಿಲ್ಲ. ಶರತ್ ಮಡಿವಾಳ , ದೀಪಕ್ ರಾವ್ ಹತ್ಯೆಯಾದಾಗ ನಿಮ್ಮ ನಾಲಗೆಯಿಂದ ಒಂದೇ ಒಂದು ಶಬ್ದ ಬರಲಿಲ್ಲವಲ್ಲ. ಆಗಾಗ ಯಾರ ಮನೆಯಲ್ಲಿ ಅವಿತುಕೊಳ್ಳುವಿರಿ ?  ಯಾಕೆ ಮಾತನಾಡದಂತೆ ಸಿದ್ದರಾಮಯ್ಯ ಸುಪಾರಿ ಕೊಟ್ಟರೇನು ?
    ಬೆಳಗ್ಗೆ ಎದ್ದರೆ ಬರೇ ಬೊಬ್ಬೆ ಇಡುವ ನೀವು ಹುಟ್ಟಿದ್ದು ಯಾವ ಧರ್ಮದಲ್ಲಿ ಸ್ವಾಮಿ? ಯಾವ ನೆಲದಲ್ಲಿ. ನಿಮಗೆ ಈ ಮಣ್ಣಿನ , ನಾಡಿನ ಬಗ್ಗೆ ಗೌರವ ಇದ್ದರೆ  ಕಾವೇರಿ ವಿಚಾರದಲ್ಲಿ ಯಾಕೆ ಬಾಯಿ ಮುಚ್ಚಿಕೊಂಡು ಇರುತ್ತಿರಿ. ಹೆಣ್ಣು ಮಕ್ಕಳ ಬಗ್ಗೆ , ಭಾರತೀಯ ಸಂಸ್ಕೃತಿ ಬಗ್ಗೆ , ಹಿಂದೂ ಧರ್ಮದ  ಬಗ್ಗೆ ನಿಮ್ಮಂತಹ ನಾಚಿಕೆಗೆಟ್ಟವರಿಂದ ನಾವು ಪಾಠ ಕಲಿಯಬೇಕೆ?
    ನಾವು ನಿಮ್ಮ ವೈಯಕ್ತಿಕ ಬದುಕನ್ನು ಇಲ್ಲಿ ಮಾತನಾಡಲು ಹೋಗುವುದಿಲ್ಲ. ಅದನ್ನು ಹೇಳಿದರೆ ನೀವು ಎಷ್ಟು ಹಿಂದೂ ಧರ್ಮ , ಹೆಣ್ಣು ಮಕ್ಕಳಿಗೆ ಗೌರವ ಕೊಡುತ್ತಿರಿ ಎನ್ನುವುದು ಜನರಿಗೆ ಸ್ಪಷ್ಟವಾಗುತ್ತದೆ. ಇನ್ನೊಬ್ಬರ ಬಗ್ಗೆ ಮಾತನಾಡುವ ಮೊದಲು ನಿಮ್ಮ ಆಚಾರ -ವಿಚಾರ ನಡೆ – ನುಡಿಗಳು ಸ್ಪಷ್ಟ, ಸ್ವಚ್ಚವಾಗಿರಲಿ.
    ವೇದವ್ಯಾಸ ಕಾಮತ್‌ಅವರ ಪತ್ನಿ  ಮತಯಾಚನೆ ಮಾಡುವುದು ನಿಜ.ಇನ್ನೂ ಅದನ್ನು ಮುಂದುವರಿಸುತ್ತಾರೆ. ಯಾಕೆಂದರೆ ಅವರು ಏನು ಮಾಡುತ್ತಾರೆ ಎನ್ನುವುದು ಅವರಿಗೆ ಸ್ಪಷ್ಟತೆ ಇದೆ. ಯಾಕಾಗಿ ಬಿಜೆಪಿಗೆ ಮತ ನೀಡಬೇಕು ಎನ್ನುವುದನ್ನು ಸ್ಪಷ್ಟವಾಗಿ ಮತದಾದರರಿಗೆ ಮನವರಿಕೆ ಮಾಡುತ್ತಿದ್ದಾರೆ. ಈ ನಾಡಿನಲ್ಲಿ ಹೆಣ್ಣು ಮಕ್ಕಳ ಮಾನಮರ್ಯಾದೆ ಉಳಿಯಬೇಕಾದರೆ , ಹೆಣ್ಣು ಮಕ್ಕಳು ಯಾವುದೇ ಭಯವಿಲ್ಲದೇ ಓಡಾಡಬೇಕಾದರೆ ಹಿಂದೂ ಧರ್ಮದ ಉಳಿಯುವುದು ಅಗತ್ಯ. ಅದಕ್ಕೆ ಬಿಜೆಪಿಗೆ ಮತ ನೀಡಿ ಎಂದು ಅವರು ಹೇಳಿದ್ದಾರೆ. ನಿಮ್ಮಂತಹ ಭಯೋತ್ಪಾದಕರಿಂದ ಈ ನಾಡು ಸುರಕ್ಷಿತವಾಗಿರಬೇಕಾದರೆ ಖಂಡಿತವಾಗಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಆಗ ಮಾತ್ರ ಹಿಂದೂ ಧರ್ಮ ಉಳಿಯಲಿದೆ.
    ಯಾರೋ ಕೊಡುವ ಹಣ , ಸೈಟು, ಪ್ರಶಸ್ತಿಗಳಿಗೆ ಹಂಬಲಿಸುವ ನಿಮ್ಮಂತಹವರು ಯಾಕೆ ಚುನಾವಣೆಗೆ ಬರುವುದಿಲ್ಲ. ಚುನಾವಣೆಯಲ್ಲಿ ನಿಂತು ಗೆದ್ದು , ದೇಶವನ್ನು ಸ್ವ ಚ್ಚಗೊಳಿಸಬಹುದಲ್ಲವೇ ?
    ಅಲ್ಲಿ ತಮಿಳುನಾಡಿನಲ್ಲಿ ಸಿನಿಮಾ ರಂಗದಲ್ಲಿ ಕೆಲಸ ಇಲ್ಲದಾಗ , ಇಲ್ಲಿ ಬಂದು ಬಾಯಿ ಬಾಯಿ ಬಡಿಯುವ ನೀವು ಕನಿಷ್ಠ ಸಿನಿಮಾ ರಂಗದ ಉದ್ದಾರಕ್ಕಾಗಿಯಾದರೂ ಏನಾದರೂ ಮಾಡಬಹುದಿಲ್ಲ ಸ್ವಾಮಿ ? ಅಲ್ಲಿನ ಬಡವರು , ಕೂಲಿ ಕಾರ್ಮಿಕರಿಗೆ ಒಂದಿಷ್ಟು ಸಹಾಯ ಮಾಡಿ ಪುಣ್ಯ ಕಟ್ಟಿಕೊಳ್ಳಬಹುದಿಲ್ಲ.
    ಮೊದಲು ಹಿಂದೂ ಧರ್ಮ ಎಂದರೆ ಏನು ? ತಿಳಿದುಕೊಳ್ಳಿ. ಅದು ಎಲ್ಲಿಯೂ ಇತರ ಧರ್ಮಗಳ ವಿರೋಧಿಯಲ್ಲವೇ ಅಲ್ಲ. ಅದನ್ನು ಮೊದಲು ತಿಳಿದುಕೊಳ್ಳಲು ಪ್ರಯತ್ನಿಸಿ. ಹಿಂದೂ ಧರ್ಮ ಎನ್ನುವುದು ಒಂದು ಸಂಸ್ಕೃತಿ. ನಾವೆಲ್ಲರೂ ಅದರಲ್ಲಿ ಒಂದೋಣ ಎನ್ನುವುದು ತಪ್ಪು ಅನ್ನೋದಾದರೆ , ನಿಮ್ಮಂತಹ ಮೂರ್ಖರಿಂದ ಬೇರೆ ಏನು ನಿರೀಕ್ಷೆ ಮಾಡೋಣ.
    ಕಾಂಗ್ರೆಸ್ ಸರ್ಕಾರ ಲಿಂಗಾಯಿತ ಹಾಗೂ ವೀರಶೈವರನ್ನು ವಿಭಜಿಸಿ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆಯಲ್ಲ , ಇದಕ್ಕೆ ನಿಮ್ಮ ಪ್ರತಿಕ್ರಿಯೆ ಇಲ್ಲವೇ ? ಪ್ರಕಾಶ್ ರೈ ಅವರೇ. ಅದು ಧರ್ಮದ ವಿಚಾರ ಅಲ್ಲವೇ ? ಅದರ ಬಗ್ಗೆ ನೀವು ಯಾಕೆ ಮಾತನಾಡುವುದಿಲ್ಲ. ಅವರು ನಿಮಗೆ ಅನ್ನ ನೀಡುವವರೇ ? ಧೈರ್ಯ ಇದ್ದರೆ ಅದರ ಬಗ್ಗೆ ಮಾತನಾಡಿಸಿ.
    ಉಳ್ಳಾಲದಲ್ಲಿ ನಡೆಯುವ ಸಮಾವೇಶ ಕೂಡಾ ಚುನಾವಣಾ ದೃಷ್ಟಿಯಿಂದ ಆಯೋಜಿಸಿದ್ದು, ಅದರಲ್ಲಿ ನೀವು ಭಾಗವಹಿಸುತ್ತಿರಿ. ಅದಕ್ಕೆ ಕಾಂಗ್ರೆಸ್ ಪ್ರಾಯೋಜಕತ್ವ ನೀಡುತ್ತದೆ. ನಿಜಕ್ಕೂ ನೀವು ಧರ್ಮ , ಜಾತಿ , ಸಮಾಜದಿಂದ ದೂರ ನಿಂತ ಸಂತ ಆದರೆ ನೀವೇಕೆ ಅದರಲ್ಲಿ ಭಾಗವಹಿಸುವಿರಿ. ನೀವು ಜನರಿಗೆ ಏನ್ನನ್ನು ಹೇಳಲು ಹೊರಟಿದ್ದಿರಿ.  ನೇರವಾಗಿ ಹೇಳಿಯಲ್ಲ , ನಾನು ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ. ಈ ಎಲ್ಲ ನಾಟಕಗಳು ಯಾಕೆ ? ಧೈರ್ಯವಾಗಿ ಕಣಕ್ಕೆ ಬನ್ನಿ . ಹೇಡಿತನ ಯಾಕೆ ? ಇಲ್ಲಿನ ಜನರು ಮೂರ್ಖರು ಅಂತ ತಿಳಿದುಕೊಂಡಿದ್ದಿರಿ ಏನು ?  ಎಂದು ಪ್ರಸ್ನಿಸಿದರು.
    ಮಂಗಳೂರು ದಕ್ಷಿಣ ವಿಧಾನಸಭಾ  ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮ್ ಪರ ಅವರ ಧರ್ಮಪತ್ನಿ ಮತಯಾಚನೆ ಮಾಡುತ್ತಿದ್ದು , ಅದನ್ನು ನಟ ಪ್ರಕಾಶ್ ರೈ ಟ್ವಿಟರ್‌ನಲ್ಲಿ ಧರ್ಮದ ಅಧಾರದಲ್ಲಿ ಮತಯಾಚನೆ ಮಾಡುತ್ತಿದ್ದಾರೆ . ಇದು ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಪರಿಯೇ ಎಂದು ಪ್ರಶ್ನಿಸಿದ್ದರು.
    Share Information
    Advertisement
    Click to comment

    You must be logged in to post a comment Login

    Leave a Reply