DAKSHINA KANNADA
ಆದಾಯದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತೆ ನಂಬರ್ 1

ಆದಾಯದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತೆ ನಂಬರ್ 1
ಸುಬ್ರಹ್ಮಣ್ಯ ಎಪ್ರಿಲ್ 28: ಪ್ರತಿವರ್ಷದಂತೆ ಈ ಬಾರಿಯೂ ದಕ್ಷಿಣಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ರಾಜ್ಯದ ಅತೀ ಹೆಚ್ಚು ಆದಾಯ ತರುವ ದೇವಲಾಯವಾಗಿ ಮೂಡಿ ಬಂದಿದ್ದು, ಈ ಬಾರಿ ಸುಮಾರು 95.92 ಕೋಟಿ ರೂಪಾಯಿ ದಾಟಿದೆ.
ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳ ಸಂಖ್ಯೆಯಲ್ಲೀ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಇಲ್ಲಿ ಭಕ್ತಾಧಿಗಳು ನೀಡುವ ಕಾಣಿಕೆಯೂ ಹೆಚ್ಚಾಗುತ್ತಿದೆ. ನಗದು ಅಪಮೌಲ್ಯೀಕರಣದಂತಹ ಸಮಸ್ಯೆ ಇದ್ದಾಗಲೂ ದೇವಸ್ಥಾನದ ಆದಾಯ ಹೆಚ್ಚಾಗಿರುವುದು ಗಮನಾರ್ಹ ಅಂಶವಾಗಿದೆ.

ಆರ್ಥಿಕ ವರ್ಷ 2017-18ರಲ್ಲಿ ದೇವಸ್ಥಾನಕ್ಕೆ 95,92,54,363 ರೂಪಾಯಿ ಆದಾಯ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಸುಮಾರು 7 ಕೋಟಿ ರೂಪಾಯಿ ಹೆಚ್ಚಿನ ಆದಾಯವಾಗಿದೆ. ರಾಜ್ಯದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸತತವಾಗಿ 7 ಬಾರಿ ನಂಬರ್ ವನ್ ಸ್ಥಾನವನ್ನು ಉಳಿಸಿಕೊಂಡಿದೆ.
ಈ ಬಾರಿ 50 ಸಾವಿರಕ್ಕೂ ಅಧಿಕ ಸರ್ಪಸಂಸ್ಕಾರ ಹರಕೆ, 90 ಬ್ರಹ್ಮರಥ ಸೇವೆ , ದಿನಕ್ಕೆ ಸರಾಸರಿ 500 ಆಶ್ಲೇಷ ಬಲಿ ಸೇವೆ ನಡೆದಿದ್ದು, ಇತರ ಸೇವೆಗಳಾದ ಶೇಷ ಸೇವೆ, ಪಂಚಾಮೃತ , ಮಹಾಭಿಷೇಕ ಇತ್ಯಾದಿ ಸೇವೆಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.