LATEST NEWS
ಒಂಟಿ ಮಹಿಳೆಯರ ಸರ ಕಳ್ಳತನ ಮಾಡುತಿದ್ದ ಯುವಕರ ಬಂಧನ
ಒಂಟಿ ಮಹಿಳೆಯರ ಸರ ಕಳ್ಳತನ ಮಾಡುತಿದ್ದ ಯುವಕರ ಬಂಧನ
ಮಂಗಳೂರು ನವೆಂಬರ್ 11: ಮಂಗಳೂರು ನಗರದಲ್ಲಿ ನಿರ್ಜನ ಪ್ರದೇಶದಲ್ಲಿ ನಡೆದುಕೊಂಡು ಹೋಗುವ ಒಂಟಿ ಮಹಿಳೆಯರ ಸರಗಳ್ಳತನ ಮಾಡುತ್ತಿದ್ದ ಮೂರು ಜನ ಯುವಕರನ್ನು ಬಂಧಿಸುವಲ್ಲಿ ಮಂಗಳೂರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹದ ದಳದ ಪೊಲೀಸ್ ತಂಡ ಯಶಸ್ವಿಯಾಗಿರುತ್ತಾರೆ.
ನಿರ್ಜನ ಪ್ರದೇಶಗಳಲ್ಲಿ ಮೋಟಾರ್ ಸೈಕಲ್‌ಗಳಲ್ಲಿ ದಾರಿ ಕೇಳುವ ನೆಪದಲ್ಲಿ ಅವರ ಬಳಿ ಹೋಗಿ ಅವರ ಕುತ್ತಿಗೆಯಲ್ಲಿರುವ ಚಿನ್ನದ ಕರಿಮಣಿಸರ/ ಸರಗಳನ್ನು ಕಸಿದುಕೊಂಡು ಬೈಕ್‌ಗಳಲ್ಲಿ ಪರಾರಿಯಾಗುತ್ತಿದ್ದರು. ಇಂತಹೊಂದು ತಂಡ ದೇರಳಕಟ್ಟೆಯಲ್ಲಿ ಕಾರ್ಯಾಚರಿಸುತ್ತಿದೆ ಎಂಬ ಮಾಹಿತಿಯ ಮೇರೆಗೆ ದಾಳಿ ನಡೆಸಿ ದೇರಳಕಟ್ಟೆಯ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಅಲ್ವಿನ್, ಮನೀಷ್ ಹಾಗೂ ಅಶ್ವಿನ್ ಎಂದು ಗುರುತಿಸಲಾಗಿದೆ.
ಇವರಿಂದ ಮಂಗಳೂರು ನಗರ ವ್ಯಾಪ್ತಿಯಲ್ಲಿ ನಡೆದ 6 ಸರ ಸುಲಿಗೆ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಆರೋಪಿಗಳಿಂದ ಚಿನ್ನದ ಕರಿಮಣಿ ಸರ ಮತ್ತು ಚಿನ್ನದ ಸರಗಳು, ಮೋಟಾರ್ ಸೈಕಲ್, ಸ್ಕೂಟರ್, ಮೊಬೈಲ್ ಪೋನ್ ಇತ್ಯಾದಿ ಸುಮಾರು 4.58 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.