Connect with us

    LATEST NEWS

    ಮಂಗಳೂರು ಗಾಂಜಾ ಸಿಟಿಯಾಗಿಸಲು ಯತ್ನ ವಿಫಲಗೊಳಿಸಿದ ಮಂಗಳೂರು ಪೊಲೀಸರು

    ಮಂಗಳೂರು ಗಾಂಜಾ ಸಿಟಿಯಾಗಿಸಲು ಯತ್ನ ವಿಫಲಗೊಳಿಸಿದ ಮಂಗಳೂರು ಪೊಲೀಸರು

    ಮಂಗಳೂರು ನವೆಂಬರ್ 11 : ಆಂಧ್ರಪ್ರದೇಶದಿಂದ ಬೃಹತ್ ಪ್ರಮಾಣದ ಗಾಂಜಾವನ್ನು ಮಂಗಳೂರಿಗೆ ಸಾಗಿಸಲು ಯತ್ನಿಸುತ್ತಿದ್ದ ಇಬ್ಬರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

    ಕೆಲವು ದಿನಗಳಿಂದ ಆಪರೇಷನ್ ಗಾಂಜಾ ನಡೆಸುತ್ತಿರುವ ಮಂಗಳೂರು ಪೊಲೀಸರಿಗೆ ಇಂದು ಮೇಜರ್ ಬ್ರೇಕ್ ಸಿಕ್ಕಿದೆ. ಮಂಗಳೂರನ್ನು ಗಾಂಜಾ ಮಾರಾಟ ಸೆಂಟರ್ ಮಾಡಲು ಆಂಧ್ರದಿಂದ 11 ಕೆ.ಜಿ ಗಾಂಜಾವನ್ನು ಮಂಗಳೂರಿಗೆ ಹಾಸನದ ಕಡೆಯಿಂದ ಮಾರುತಿ 800 ವಾಹನದಲ್ಲಿ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಂಗಳೂರು ಪೊಲೀಸರು ಇಬ್ಬರನ್ನು ಬಂಧಿಸಿ 11 ಕೆಜಿ 70 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

    ಬಂಧಿತರನ್ನು ಹಾಸನ ಜಿಲ್ಲೆಯ ಪಿ. ರಘು, ಮತ್ತು ಪ್ರಕಾಶ್ ಎಂದು ಗುರುತಿಸಲಾಗಿದೆ. ಇವರಿಂದ ವಶಪಡಿಸಿಕೊಂಡ ಗಾಂಜಾದ ಬೆಲೆ ಸುಮಾರು 3.30 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply