MANGALORE
ದೀಪಾವಳಿ ಪ್ರಯುಕ್ತ 1000 ಕುಟುಂಬಗಳಿಗೆ ಅಕ್ಕಿ ಭಾಗ್ಯ
ದೀಪಾವಳಿ ಪ್ರಯುಕ್ತ 1000 ಕುಟುಂಬಗಳಿಗೆ ಅಕ್ಕಿ ಭಾಗ್ಯ
ಮಂಗಳೂರು, ಅಕ್ಟೋಬರ್ 19 : ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ಸುಮಾರು 1000ಕ್ಕಿಂತಲೂ ಅಧಿಕ ಫಲನುಭವಿಗಳಿಗೆ ಅಕ್ಕಿ ವಿತರಣೆಯ ಕಾರ್ಯಕ್ರಮ ಮಂಗಳೂರಿನ ಪುರಭವನದಲ್ಲಿ ನಡೆಯಿತು. ಸರ್ಕಾರಿ ಮುಖ್ಯ ಸಚೇತಕರಾದ ಐವನ್ ಡಿ’ ಸೋಜಾರವ ನೇತೃತ್ವದಲ್ಲಿ ನಡೆದ ಅಕ್ಕಿವಿತರಣಾ ಸಮಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯು,ಟಿ ಖಾದರ್ ಸಚಿವರು, ಮಂಗಳೂರು ಮೇಯರ್ ಕವಿತಾ ಸನಿಲ್, ಎ. ಸದಾನಂದ ಶೆಟ್ಟಿ ,ಡಿಸಿ ಸಿ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ಅಮರನಾಥ ಶೆಟ್ಟಿ, ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.