UDUPI
ಎಸ್.ಸಿ/ಎಸ್.ಟಿ ಕಾರ್ಯಕ್ರಮ ಅನುಷ್ಟಾನದ ವರದಿ 2ದಿನದೊಳಗೆ ನೀಡಲು ಉಡುಪಿ ಡಿಸಿ ಆದೇಶ
ಎಸ್.ಸಿ/ಎಸ್.ಟಿ ಕಾರ್ಯಕ್ರಮ ಅನುಷ್ಟಾನದ ವರದಿ 2ದಿನದೊಳಗೆ ನೀಡಲು ಉಡುಪಿ ಡಿಸಿ ಆದೇಶ
ಉಡುಪಿ, ಜನವರಿ 17 : ಗ್ರಾಮ ಪಂಚಾಯತ್ ವ್ಯಾಪ್ತಿಯ ಶೇ.25 ಮತ್ತು ಪಟ್ಟಣಪಂಚಾಯಿತಿ ಮತ್ತು ಪುರಸಭೆ. ನಗರಸಭೆ ವ್ಯಾಪ್ತಿಯ ಶೇ. 24.10 ಕಾಯ್ದಿರಿಸಿದ ಅನುದಾನ ಸಮಯಮಿತಿಯೊಳಗೆ ಕ್ರಿಯಾಯೋಜನೆಯಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಅಭಿವೃದ್ಧಿಗೆ ಬಳಸಿದ ಸವಿವರ ವರದಿಯನ್ನು ಎರಡು ದಿನಗಳೊಗಾಗಿ ನೀಡಲು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಆದೇಶಿಸಿದರು.
ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಜಿಲ್ಲೆಯ ಪ್ರತಿ ಪಂಚಾಯತ್‍ನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ.25ರ ಯೋಜನೆಯಡಿ ಕೈಗೊಂಡ ಕ್ರಮಗಳು ಹಾಗೂ ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲು ಸಂಬಂಧಪಟ್ಟವರಿಗೆ ಸೂಚಿಸಲಾಗಿದ್ದು, ಅನುಷ್ಠಾನದ ವರದಿ ನೀಡಿ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಪ್ರತಿ ಪಂಚಾಯತ್‍ಗಳು ಎಷ್ಟು ಯಶಸ್ವಿಯಾಗಿ ಜಾಗೃತಿ ಕಾರ್ಯಕ್ರಮಗಳು ನಡೆಸಿವೆ ಎಂಬುವುದರ ಬಗ್ಗೆ ತಾಲೂಕಿನ ಇಒಗಳು ಪರಿಶೀಲಿಸಿ, ವರದಿಯನ್ನು ಸಲ್ಲಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಕುಂದು ಕೊರತೆ ಸಭೆಯಲ್ಲಿ ಬಂದ ದೂರುಗಳಿಗೆ ಸಂಬಂಧಿಸಿದಂತೆ ಕೈಗೊಳ್ಳಲಾದ ಕ್ರಮಗಳ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ಪಡೆದರಲ್ಲದೆ, ಸಮಸ್ಯೆಗಳ ತೀವ್ರತೆ ಅರಿತು ಸ್ಪಂದಿಸಲು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಿವಾನಂದ ಕಾಪಶಿ ಉಪಸ್ಥಿತರಿದ್ದರು.