LATEST NEWS
ಅಯೋಧ್ಯೆ ರಾಮಮಂದಿರಕ್ಕಾಗಿ ಹೋರಾಡಿದವರಿಗೆ ಮಾಸಿಕ ಪಿಂಚಣಿ ನೀಡಬೇಕು – ವಾರಣಾಸಿಯ ನರೇಂದ್ರನಂದಗಿರಿ ಮಹಾರಾಜ್
ಅಯೋಧ್ಯೆ ರಾಮಮಂದಿರಕ್ಕಾಗಿ ಹೋರಾಡಿದವರಿಗೆ ಮಾಸಿಕ ಪಿಂಚಣಿ ನೀಡಬೇಕು – ವಾರಣಾಸಿಯ ನರೇಂದ್ರನಂದಗಿರಿ ಮಹಾರಾಜ್
ಉಡುಪಿ ನವೆಂಬರ್ 26: ಬಹುಸಂಖ್ಯಾತರು ಒಂದು ಮದುವೆಯಾಗಿ 2 ಮಕ್ಕಳನ್ನು ಪಡೆಯುತ್ತಾರೆ, ಆದರೆ ಅಲ್ಪಸಂಖ್ಯಾತರು 4 ಮದುವೆಯಾಗಿ 20 ಮಕ್ಕಳನ್ನು ಹೊಂದುತ್ತಾರೆ. ಆದರೂ ದೇಶದಲ್ಲಿ ಹೆಚ್ಚಿನ ಸೌಲಭ್ಯಗಳು ಅಲ್ಪಸಂಖ್ಯಾರತರಿಗೆ ದೊರೆಯುತ್ತಿದೆ ಎಂದು ವಾರಣಾಸಿಯ ನರೇಂದ್ರನಂದಗಿರಿ ಮಹಾರಾಜ್ ಆರೋಪಿಸಿದ್ದಾರೆ.
ದೇಶದಲ್ಲಿರುವ ಜಾತಿ ವ್ಯವಸ್ಥೆ ಇಡೀ ದೇಶಕ್ಕೆ ಹಾನಿಕಾರಕವಾಗಿದೆ ಎಂದ ಅವರು, ಜಾತಿ ವ್ಯವಸ್ಥೆ ತೊಲಗಿ ಎಲ್ಲರಿಗೂ ಸಮಾನ ಸೌಲಭ್ಯ ದೊರೆಯುವಂತಾಗಬೇಕು ಎಂದು ಹೇಳಿದರು. ಹಿಂದೂ ಮಠಮಂದಿರಗಳ ಮೇಲೆ ಸರಕಾರದ ನಿಯಂತ್ರಣ ಹೊಂದುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ನರೇಂದ್ರನಂದಗಿರಿ ಮಹಾರಾಜ್ , ಸರಕಾರದ ಬದಲು ಸಂತರ ಮಂಡಳಿ ನಿರ್ಮಾಣ ಮಾಡಿ ಅದರ ಮೂಲಕ ಧನ ವಿನಿಯೋಗ ಮಾಡಬೇಕು ಎಂದು ಹೇಳಿದರು.
ಪಾಕಿಸ್ತಾನದ ಉಗ್ರರು ಜೈಲಿನಿಂದ ಬಿಡುಗಡೆಗೊಂಡರೆ ಉತ್ತರ ಪ್ರದೇಶದಲ್ಲಿ ಪಾಕಿಸ್ತಾನದ ಬಾವುಟ ಹಾರಾಡಿಸಿದ್ದಾರೆ. ಸ್ವಾತಂತ್ರ್ಯ ಹೋರಾಟ ನಡೆಸಿದವರಿಗೆ ಮಾಸಿಕ ಸೌಲಭ್ಯ ಒದಗುತ್ತಿರುವಂತೆ, ಅಯೋಧ್ಯೆ ಮಂದಿರಕ್ಕಾಗಿ ಹೋರಾಟ ನಡೆಸಿದವರಿಗೂ ಮಾಸಿಕ ಪಿಂಚಣಿ ದೊರೆಯಬೇಕು ಎಂದು ಹೇಳಿದರು. ಸೂರ್ಯಚಂದ್ರರಿರುವವರಿಗೆ ಅಯೋಧ್ಯೆಯಲ್ಲಿ ರಾಮಮಂದಿರವೇ ಇರುತ್ತದೆ, ಅಯೋಧ್ಯೆ ವಿಚಾರದಲ್ಲಿ ಯಾವುದೇ ಒಪ್ಪಂದವಿಲ್ಲ ಎಂದು ತಿಳಿಸಿದರು.