LATEST NEWS
ಝೊಮಾಟೋ ಗರ್ಲ್ ಯುವ ರಾಜಕಾರಣಿ ಮೇಘನಾ ದಾಸ್ ವಿಧಿವಶ

ಮಂಗಳೂರು ಎಪ್ರಿಲ್ 29 : ಕಳೆದ ಮಂಗಳೂರು ಮಹಾನಗರಪಾಲಿಕೆ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಯುವ ರಾಜಕಾರಣಿ ಝೊಮಾಟೋ ಗರ್ಲ್ ಎಂದೇ ಪ್ರಖ್ಯಾತಿ ಪಡೆದಿದ್ದ ಮೇಘನಾ ದಾಸ್ ಅವರು ವಿಧಿವಶರಾಗಿದ್ದಾರೆ.
ಕಳೆದ ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತಿದ್ದ ಮೇಘನಾ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಈ ಹಿಂದೆ ಝೊಮಾಟೋ ಫುಡ್ ಡೆಲಿವರಿ ಗರ್ಲ್ ಆಗಿ ಕೆಲಸ ಮಾಡುತ್ತಿದ್ದ ಮೇಘನಾ ಅವರು 2019 ರಲ್ಲಿ ಮಂಗಳೂರು ಮಹಾ ನಗರಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಣ್ಣಗುಡ್ಡ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದರು. ನಂತರ ಚುನಾವಣೆಯಲ್ಲಿ ಸೋತರು , ಮತ್ತೆ ತಮ್ಮ ಪುಡ್ ಡೆಲಿವರಿ ಕೆಲಸಕ್ಕೆ ಮರಳಿದ್ದರು. ಈ ನಡುವೆ ಅವರಿಗೆ ಆರೋಗ್ಯ ಕೈಕೊಟ್ಟ ಹಿನ್ನಲೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಆದರೆ ಮತ್ತೆ ಆರೋಗ್ಯ ಹದಗೆಟ್ಟೆ ಹಿನ್ನಲೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ.

ಫುಡ್ ಡೆಲಿವರಿ ಗರ್ಲ್ ಆಗಿ ಕೆಲಸ ಮಾಡಿ ಇತರ ಮಹಿಳೆಯರಿಗೂ ಸ್ಫೂರ್ತಿಯಾಗಿದ್ದ ಸ್ವಾಭಿಮಾನಿ ಮೇಘನಾ ಇನ್ನು ನೆನಪು ಮಾತ್ರ..ಮೇಘನಾಳ ಅಖಾಲಿಕ ನಿಧನಕ್ಕೆ ಪಕ್ಷತೀತವಾಗಿ ನಾಯಕರುಗಳು, ಸಮಾಜದ ಗಣ್ಯರು ಕಂಬನಿ ಮಿಡಿದಿದ್ದಾರೆ.