LATEST NEWS
ಮದುವೆ ಮನೆಯಲ್ಲೇ ಪ್ರಿಯತಮೆಯನ್ನು ಗುಂಡಿಕ್ಕಿ ಕೊಂದ ಪಾಗಲ್ ಪ್ರೇಮಿ….!!
ಮಥುರಾ ಎಪ್ರಿಲ್ 29: ಬೇರೊಬ್ಬನ ಜೊತೆ ಮದುವೆಯಾಗುತ್ತಿದ್ದ ವಧುವನ್ನು ಗುಂಡಿಕ್ಕಿ ಕೊಂದ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ.
ಮಥುರಾದ ಮುಬಾರಿಕ್ಪುರ ಗ್ರಾಮದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಈ ನಡೆದಿದೆ. ಕಾಜಲ್ ಮೃತ ಮಹಿಳೆ. ಹಾಗೂ ಅನಿಶ್ ಆರೋಪಿ. ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದ ಕಾಜಲ್ಳನ್ನು ಅನಿಶ್ ಗುಂಡಿಕ್ಕಿ ಕೊಂದಿದ್ದಾನೆ
ಆರೋಪಿಯು ಯುವತಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದನು. ಆಕೆಯು ಬೇರೊಬ್ಬ ಪುರುಷನೊಂದಿಗೆ ವಿವಾಹವಾಗುವುದು ಆತನಿಗೆ ಇಷ್ಟವಿರಲಿಲ್ಲ ಎಂದು ವರದಿಯಾಗಿದೆ. ಘಟನೆಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಸಂತ್ರಸ್ತೆಯ ತಂದೆ ಖುಬಿ ರಾಮ್ ಪ್ರಜಾಪತಿ, ‘ಜೈ ಮಾಲಾ’ ಕಾರ್ಯಕ್ರಮ ಮುಗಿದ ನಂತರ ನನ್ನ ಮಗಳು ರಿಫ್ರೆಶ್ ಆಗಲು ಕೋಣೆಗೆ ಹೋಗಿದ್ದಳು. ಅಲ್ಲಿಗೆ ನುಗ್ಗಿದ ಅಪರಿಚಿತ ವ್ಯಕ್ತಿ ಆಕೆಯನ್ನು ಗುಂಡಿಕ್ಕಿ ಕೊಂದಿದ್ದಾನೆ’ ಎಂದು ತಿಳಿಸಿದ್ದಾರೆ.
You must be logged in to post a comment Login