LATEST NEWS
Zeus Fitness club ನ ನೈಟ್ ಮ್ಯಾರಥಾನ್ ಗೆ ಪೂರ್ವಭಾವಿ ಪ್ರೋಮೊ ರನ್

ಮಂಗಳೂರು ಅಕ್ಟೋಬರ್ 08: ನವೆಂಬರ್ 5 ರ ಮಂಗಳೂರು ಮ್ಯಾರಥಾನ್ ಹಾಗೂ ಇದೇ ತಿಂಗಳ 15 ರಂದು ಮೊದಲ ಬಾರಿಗೆ ನಡೆಯುವ ನೈಟ್ ಮ್ಯಾರಥಾನ್ ಗೆ ಪೂರ್ವಭಾವಿಯಾಗಿ ಪ್ರೋಮೋ ರನ್ ಇಂದು ನಡೆಯಿತು.
Zeus Fitness club kadri ಆಯೋಜಿಸುವ ಮ್ಯಾರಾಥಾನ್ ಗೆ ಇಂದು ಪೂರ್ವಭಾವಿಯಾಗಿ ಇಂದು ಮುಂಜಾನೆ zeus Fitness ಕದ್ರಿ ರಾಜೇಶ್ ನೇತ್ರತ್ವದಲ್ಲಿ ಪ್ರೋಮೊ ರನ್ ನಡೆಯಿತು, ಈ ಪ್ರೊಮೋ ರನ್ ಮಂಗಳೂರು ಮ್ಯಾರಥಾನ್ , ಡೆಕಥ್ಲನ್, endurance peanut butter ಸಹಭಾಗಿತ್ವದಲ್ಲಿ ನಡೆಯಿತು

ಕದ್ರಿ ಮಲ್ಲಿಕಟ್ಟೆಯಿಂದ ಕಂಕನಾಡಿ ಮಾರ್ಗವಾಗಿ ಜ್ಯೋತಿ ವೃತ್ತ, ಬಂಟ್ಸ್ ಹಾಸ್ಟೆಲ್ ಮುಖಾಂತರ ಕದ್ರಿ ದ್ವಾರದಿಂದ ಹಾದು ಕದ್ರಿ ಮಲ್ಲಿಕಟ್ಟೆಯಲ್ಲಿ ಸಮಪ್ತಿಗೊಂಡಿತು. ಕಾರ್ಯಕ್ರಮಕ್ಕೆ ಮಂಗಳೂರು ಉತ್ತರ ವಿಭಾಗದ ಸಹಾಯಕ ಪೋಲಿಸ್ ಆಯುಕ್ತರಾದ ಮನೋಜ್ ಕುಮಾರ್ ಚಾಲನೆ ನೀಡಿದರು ಇದರಲ್ಲಿ Zeus fitness ನ ಸದಸ್ಯರು ಸಹಾ ಭಾಗಿಯಾಗಿದ್ದರು. ಇದರಲ್ಲಿ ಪುರುಷರು ಮಹಿಳೆಯರು ಹಾಗು ಮಕ್ಕಳಿಂದ ಹಿಡಿದು ವೃದ್ದರು ಸೇರಿ ಸರಿಸುಮಾರು 250ಕ್ಕು ಅಧಿಕ ಸಂಖ್ಯೆಯಲ್ಲಿ ಈ ಮ್ಯಾರಥಾನ್ ನಲ್ಲಿ ಭಾಗಿಯಾಗಿದ್ದರು.