Connect with us

FILM

27ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಖ್ಯಾತ ಯೂಟ್ಯೂಬರ್ ಅಬ್ರದೀಪ್ ಸಹಾ

ಮುಂಬೈ ಎಪ್ರಿಲ್ 17: ಆಂಗ್ರಿ ರಾಂಟ್‌ಮ್ಯಾನ್ ಎಂದು ವ್ಯಾಪಕವಾಗಿ ಕರೆಯಲ್ಪಡುವ ಜನಪ್ರಿಯ ಯೂಟ್ಯೂಬರ್ ಅಬ್ರದೀಪ್ ಸಹಾ ಹೃದಯಸಂಬಂಧಿ ಖಾಯಿಲೆಯಿಂದಾಗಿ ನಿಧನರಾಗಿದ್ದಾರೆ.


ಅಬ್ರದೀಪ್ ಸಹಾ ಅವರು ಇತ್ತೀಚೆಗೆ ಹೃದಯಕ್ಕೆ ಸಂಬಂಧಿಸಿದಂತೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಶಸ್ತ್ರಚಿಕಿತ್ಸೆ ನಂತರ ಅವರ ಆರೋಗ್ಯ ಸ್ಥಿತಿ ಸಂಪೂರ್ಣ ಹದಗೆಟ್ಟಿತ್ತು. ಈ ಬಗ್ಗೆ ಅವರ ತಂದೆ ಈ ಬಗ್ಗೆ ಮಾಹಿತಿ ನೀಡಿದ್ದು, ಅವರು ಇನ್ನೂ ಐಸಿಯುನಲ್ಲಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದರು. ಆದರೆ ಕಳೆದ ಎರಡು ದಿನಗಳಿಂದ ಅವರ ಆರೋಗ್ಯ ಸ್ಥಿತಿ ಸಂಪೂರ್ಣ ಹದಗೆಟ್ಟಿದ ಪರಿಣಾಮ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಾವನಪ್ಪಿದ್ದಾರೆ.

ಅಬ್ರದೀಪ್ ತನ್ನ ಯೂಟ್ಯೂಬ್ ಚಾನೆಲ್ ಅನ್ನು ಆಗಸ್ಟ್ 18, 2017 ರಂದು ಪ್ರಾರಂಭಿಸಿದರು. ಅವರ ಮೊದಲ ವೀಡಿಯೊವನ್ನು “ನಾನು ಅನ್ನಾಬೆಲ್ಲೆ ಚಲನಚಿತ್ರವನ್ನು ಏಕೆ ನೋಡುವುದಿಲ್ಲ!!!!!!” ಅದರಲ್ಲಿ, ದಿ ಕಾಂಜ್ಯೂರಿಂಗ್ ನೋಡಿದ ನಂತರ ಇನ್ನು ಮುಂದೆ ಯಾವುದೇ ಭಯಾನಕ ಚಿತ್ರಗಳನ್ನು ನೋಡಲು ನಾನು ತುಂಬಾ ಹೆದರುತ್ತಿದ್ದೆ ಎಂದು ವಿವರಿಸಿದರು. ಬಳಿಕ ಚಲನಚಿತ್ರಗಳ ಕುರಿತಂತೆ ವಿಭಿನ್ನವಾಗಿ ವಿಶ್ಲೇಷಣೆ ಮಾಡುತ್ತಿದ್ದ ಅವರು YouTube ಚಾನಲ್ 480k ಚಂದಾದಾರರನ್ನು ಹೊಂದಿದ್ದಾರೆ. ಜನಪ್ರಿಯ ಯೂಟ್ಯೂಬರ್ ಸಾವಿನ ಸುದ್ದಿ ತಿಳಿದ ತಕ್ಷಣ, ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಶೃದ್ದಾಂಜಲಿ ಸಲ್ಲಿಸುತ್ತಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *