Connect with us

    KARNATAKA

    ಮದುವೆಯಾಗಲು ಹೆಣ್ಣು ಸಿಗದಿದ್ದಕ್ಕೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಯುವಕ

    ವಿಜಯನಗರ ಜನವರಿ 16: ಮದುವೆಗೆ ಹೆಣ್ಣು ಸಿಗದ ಕಾರಣ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಕೂಡ್ಲಿಗಿ ತಾಲೂಕಿನ‌ ಗುಡೇಕೋಟೆ ಗ್ರಾಮದಲ್ಲಿ ನಡೆದಿದೆ. ಗುಡೇಕೋಟೆ ಗ್ರಾಮದ ಬಿ.‌ಮಧುಸೂದನ್ (26) ಮೃತ ದುರ್ದೈವಿ.

    ಯುವಕನ ತಂದೆ ಅರೆ ಹುಚ್ಚನ ಹಾಗೆ ವರ್ತನೆ ಮಾಡುತ್ತಾನೆಂದು ಕನ್ಯೆ ಕೊಡಲು ನಿರಾಕರಿಸುತ್ತಿದ್ದರಂತೆ. ಇದರಿಂದ ಮನನೊಂದಿದ್ದ ಯುವಕ ಕುಡಿಯಲು ಆರಂಭಿಸಿದ್ದಾನೆ. ನನಗೆ ಮದುವೆ ಅಗಲ್ಲ ಎಂದು ಮಧುಸೂದನ್ ಜನವರಿ 5ರಂದು ವಿಷಸೇವಿಸಿದ್ದಾನೆ. ಕೂಡಲೆ ಮಧುಸೂಧನ್​​ನನ್ನು ಬಳ್ಳಾರಿಯ ವಿಮ್ಸ್​​ ಆಸ್ಪತ್ರೆಗ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಧುಸೂಧನ್​ ಮೃತಪಟ್ಟಿದ್ದಾನೆ. ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply