Connect with us

BELTHANGADI

WhatsApp ನಿಂದ ಸಮಾಜಸೇವೆಯನ್ನು ಮಾಡಬಹುದು ಎಂದು ತೋರಿಸಿದೆ ಈ ವಾಟ್ಸಪ್ ಗ್ರೂಪ್

WhatsApp ನಿಂದ ಸಮಾಜಸೇವೆಯನ್ನು ಮಾಡಬಹುದು ಎಂದು ತೋರಿಸಿದೆ ಈ ವಾಟ್ಸಪ್ ಗ್ರೂಪ್

ಬೆಳ್ತಂಗಡಿ ಜನವರಿ 24: ಇನ್ನೊಬ್ಬರ ತೇಜೋವಧೆ, ಅಪರಾಧ ಕೃತ್ಯ, ದೇಶದ್ರೋಹಿ ಹೇಳಿಕೆಗಳಿಗೋಸ್ಕರವೇ ಸಾಮಾಜಿಕ ಜಾಲತಾಣಗಳನ್ನು ಬಳಸುವ ಜನರ ಮಧ್ಯೆ ಬೆಳ್ತಂಗಡಿಯ ವಾಟ್ಸಪ್ ಗ್ರೂಪ್ ಸಂಘಟನೆಯೊಂದು ಸದ್ದಿಲ್ಲದೇ ಸಮಾಜಸೇವೆ ಕಾರ್ಯ ಮಾಡುತ್ತಿದ್ದು 42 ಲಕ್ಷ ರೂಪಾಯಿ ಹಣ ಸಂಗ್ರಹಿಸಿ ಬಡವರಿಗೆ ಸಹಾಯ ಹಸ್ತ ಚಾಚಿದೆ.

ಸಾಮಾಜಿಕ ಜಾಲತಾಣ ಕೇವಲ ಮನೋರಂಜನೆಗೆ ಮಾತ್ರ ಬಳಸುವ ಜನರ ಮಧ್ಯೆ ಬೆಳ್ತಂಗಡಿಯ ವೀರ ಕೇಸರಿ ಎಂಬ ವಾಟ್ಸಪ್ ಗ್ರೂಪ್ ನ ಸದಸ್ಯರು ಕಳೆದ ಮೂರುವರೆ ವರ್ಷದಲ್ಲಿ‌42 ಲಕ್ಷ ರೂಪಾಯಿ ಹಣವನ್ನು ಸಂಗ್ರಹಿಸಿ ಬಡವರಿಗೆ ನೀಡಿದ್ದಾರೆ.ಈಗಾಗಲೇ 100ಕ್ಕೂ ಅಧಿಕ ಯೋಜನೆಗಳನ್ನು ಈ ಸದಸ್ಯರು ಕಾರ್ಯಗತಗೊಳಿಸಿದ್ದಾರೆ. ಈ ಬಾರಿ 40 ನೇ ತಿಂಗಳ 100 ನೇ ಯೋಜನೆಯನ್ನು ಈ ವಾಟ್ಸಪ್ ಗುಂಪಿನ ಸದಸ್ಯರು ಸೇರಿ ಬಡ ಕುಟುಂಬಕ್ಕೆ ಮನೆ ಕಟ್ಟಿ ಕೊಡುವ ಮೂಲಕ ಅರ್ಥಪೂರ್ಣಗೊಳಿಸಿದೆ.

ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಕನ್ನಡಿಕಟ್ಟೆ ಎಂಬಲ್ಲಿ ಸೂರು ಇಲ್ಲದ ಕುಟುಂಬಕ್ಕೆ ಮನೆ ಕಟ್ಟಿಕೊಟ್ಟಿದ್ದಾರೆ. ಈ 100 ನೇ ಯೋಜನೆಯನ್ನು ಅದ್ಧೂರಿ ಯಿಂದ ಮಾಡಿದ್ದು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಯುವ ಉದ್ಯಮಿ ಅಶ್ವಥ್ ಬಳಂಜ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ಮನೆ ಹಸ್ತಾಂತರಿಸಿದ್ದಾರೆ. ಮಧ್ಯಮ‌ ಕುಟುಂಬದ ಜನರೇ ಈ ವಾಟ್ಸಪ್ ಗುಂಪಿನ ಸದಸ್ಯರಾಗಿದ್ದು, ತಾವು ದುಡಿದ ಹಣದಲ್ಲಿ ಒಂದು ಭಾಗವನ್ನು ಸಮಾಜದ ಬಡಬಗ್ಗರಿಗೆ ನೆರವಾಗಿ ಮಾದರಿಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ಈ ರೀತಿಯಾಗಿಯೂ ಸಮಾಜದ ಒಳತಿಗಾಗಿ ಬಳಸಿಕೊಳ್ಳಬಹುದು ಎಂದು ತೋರಿಸಿಕೊಟ್ಟಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *